ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಸ್ವಚ್ಚ ಭಾರತ್ ಅಭಿಯಾನ್ಗೆ ಕೈ ಜೋಡಿಸಿದ 105 ವರ್ಷದ ವೃದ್ಧೆ ಕುಂವರ್ ಬಾಯಿಗೆ ಹೊಗಳಿಕೆಯ ಸುರಿಮಳೆ ಬಂದಿದೆ.
ಮೋದಿಯವರ ಸ್ವಚ್ಚ ಭಾರತ್ ಅಭಿಯಾನ್ದ ಅಂಗವಾಗಿ ತನ್ನ ಜೀವನಕ್ಕೆ ಆಧಾರವಾಗಿದ್ದ ಮೇಕೆಗಳನ್ನು ಮಾರಾಟ ಮಾಡಿ ಶೌಚಾಲಯಗಳನ್ನು ನಿರ್ಮಿಸಿದ ಮಹಾನ್ ಅಜ್ಜಿಯ ಸಾಧನೆಗೆ ದೇಶವೇ ಕೊಂಡಾಡಿದೆ.
ರಾಜಧಾನಿಯಲ್ಲಿ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿರುವ ಸ್ವಚ್ಚತಾ ದಿವಸ್ ಕಾರ್ಯಕ್ರಮದಲ್ಲಿ 105 ವರ್ಷದ ಅಜ್ಜಿಯ ಸಾಧನೆಗೆ ಮೆಚ್ಚುಗೆ ಸೂಚಿಸಿ ಪ್ರಧಾನಿ ಮೋದಿ ಸನ್ಮಾನಿಸಲಿದ್ದಾರೆ.
ರಾಜನಂದ್ಗಾಂವ್ನಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಂದರ್ಭದಲ್ಲಿ ಪ್ರಧಾನಿ ಮೋದಿ, ಅಜ್ಜಿಯ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.
ಮನೆಯಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಲು ವೃದ್ಧೆ ತನ್ನ 8-10 ಮೇಕೆಗಳನ್ನು ಮಾರಾಟ ಮಾಡಿದ್ದಲ್ಲದೇ ಶೌಚಾಲಯದ ಮಹತ್ವದ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದ್ದರಿಂದ ಸಂಪೂರ್ಣ ಗ್ರಾಮದಲ್ಲಿ ಮನೆ ಮನೆಯಲ್ಲಿ ಶೌಚಾಲಯಗಳು ನಿರ್ಮಾಣಗೊಂಡಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ