Webdunia - Bharat's app for daily news and videos

Install App

ಉನಾ ದಾಳಿ ಪೀಡಿತರನ್ನು ಭೇಟಿಯಾಗಲಿರುವ ಮಾಯಾವತಿ

Webdunia
ಗುರುವಾರ, 4 ಆಗಸ್ಟ್ 2016 (15:56 IST)
ಬಹುಜನ ಸಮಾಜವಾದಿ ನಾಯಕಿ ಮಾಯಾವತಿ ಇಂದು ಗುಜರಾತ್‌ಗೆ ಭೇಟಿ ನೀಡಲಿದ್ದು ಉನಾ ದಾಳಿ ಪೀಡಿತರನ್ನು ಭೇಟಿಯಾಗಲಿದ್ದಾರೆ. ತನ್ನ ಪಕ್ಷದ ಹೆಜ್ಜೆಗುರುತನ್ನು ಉತ್ತರ ಪ್ರದೇಶದ ಹೊರಗೆ   ವಿಸ್ತರಿಸುವುದು ಮತ್ತು ದೇಶದಲ್ಲಿ ನಡೆಯುತ್ತಿರುವ ದಲಿತರ ವಿರುದ್ಧದ ಹಿಂಸಾಚಾರದ ಕುರಿತು ಧ್ವನಿ ಎತ್ತುವುದು ಅವರ ಈ ಭೇಟಿಯ ಹಿಂದಿನ ಉದ್ದೇಶ.

ಜನವರಿಯಲ್ಲಿ ಹೈದರಾಬಾದ್‌ನಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದಿಂದ ಹಿಡಿದು ಇತ್ತೀಚಿಗೆ ಗುಜರಾತ್‌ನ ಉನಾದಲ್ಲಿ ಜುಲೈ 11ರಂದು ಸತ್ತ ಆಕಳ ಚರ್ಮವನ್ನು ಕಿತ್ತಿದ್ದಕ್ಕಾಗಿ ನಾಲ್ಕು ದಲಿತರನ್ನು  ಕಟ್ಟಿ ಹಾಕಿ ಥಳಿಸಿದ್ದರ ಘಟನೆಯವರೆಗೆ ದಲಿತರ ಮೇಲಿನ ಎಲ್ಲ ದೌರ್ಜನ್ಯದ ವಿರುದ್ಧ ಮಾಯಾವತಿ ಸಂಸತ್ತಿನ ಒಳಗೆ ಮತ್ತು ಹೊರಗೆ ಧ್ವನಿ ಎತ್ತಿದ್ದಾರೆ.

ಉನಾ ಘಟನೆಯನ್ನು ಖಂಡಿಸಿ  ಜುಲೈ 31 ರಂದು ಅಹಮದಾಬಾದ್‌ನಲ್ಲಿ ಸಾವಿರಾರು ದಲಿತರು ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದರು. ಅಂದು ಇನ್ನು ಮೇಲೆ ಸತ್ತ ಪಶುವಿನ ದೇಹವನ್ನು ಎತ್ತಬಾರದು ಎಂಬ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಮರುದಿನ ಪ್ರಧಾನಿ ಮೋದಿ ವಿರುದ್ಧ ಸಂಸತ್ತಿನಲ್ಲಿ ಹರಿಹಾಯ್ದಿದ್ದ ಮಾಯಾವತಿ ಮೌನ ಮುರಿದು ದಲಿತರ ವಿರುದ್ಧದ ದೌರ್ಜನ್ಯದ ಬಗ್ಗೆ ಮಾತಾಡುವಂತೆ ಹೇಳಿದ್ದರು.

ಮೃತ ಜಾನುವಾರುಗಳ ಚರ್ಮ ತೆಗೆಯುತ್ತಿದ್ದ ಕೆಲ ದಲಿತ ಯುವಕರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ರಸ್ತೆ ಬದಿಯಲ್ಲೆ ಅವರನ್ನು ಅರೆ ಬೆತ್ತಲೆಗೊಳಿಸಿ ಥಳಿಸಲಾಗಿತ್ತು. ಇದರಿಂದಾಗಿ ದಲಿತ ಸಮುದಾಯದವರು ಭಾರಿ ಪ್ರತಿಭಟನೆ ನಡೆಸಿದ್ದರು. ಇಬ್ಬರು ಮೃತಪಟ್ಟ ನಂತರ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಬೇಟೆ: ಎರಡು ದಿನಗಳಲ್ಲಿ ಆರು ಭಯೋತ್ಪಾದಕರ ಉಡೀಸ್‌

Rajnath Singh: ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟಿದ್ದು ಯಾರೆಂದು ಬಹಿರಂಗಪಡಿಸಿದ ರಾಜನಾಥ್ ಸಿಂಗ್

ಕುಕ್ಕೆ ಸುಬ್ರಹ್ಮಣ್ಯಕ್ಕೆ ರೌಡಿ ಶೀಟರ್ ಅಧ್ಯಕ್ಷ: ಯಾಕೆ ಆಗಬಾರದು ಎಂದ ಸಚಿವ ದಿನೇಶ್ ಗುಂಡೂರಾವ್

ನಮ್ಮ ಸಹಾಯ ಪಡೆದು ನಮಗೇ ದ್ರೋಹ ಬಗೆಯುತ್ತೀರಾ: ಟರ್ಕಿ, ಚೀನಾಗೆ ಭಾರತ ತಕ್ಕ ಪಾಠ

Gold Price today: ಚಿನ್ನ ಖರೀದಿದಾರರಿಗೆ ಇಂದು ಸ್ವಲ್ಪ ಸಿಹಿ ಸ್ವಲ್ಪ ಕಹಿ

ಮುಂದಿನ ಸುದ್ದಿ
Show comments