ವಿಶಾಖಪಟ್ಟಣದ ದುವ್ವಡ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ನಗರದ ಹೊರವಲಯದಲ್ಲಿರುವ ಜೈವಿಕ ಡೀಸೆಲ್ ತಯಾರಿಕಾ ಘಟಕಕ್ಕೆ ಬೆಂಕಿ ಹೊತ್ತಿಕೊಂಡು 6 ತೈಲ ಟ್ಯಾಂಕ್ ಗಳು ಸ್ಫೋಟಗೊಂಡಿವೆ.
ವಿಶೇಷ ಆರ್ಥಿಕ ವಲಯದಲ್ಲಿರುವ ಜೈವಿಕ ತೈಲ ಉತ್ಪಾದನಾ ಘಟಕ ಬಯೋಮ್ಯಾಕ್ಸ್‌ನಲ್ಲಿ (ಬಿಎಫ್ಎಲ್)ನಲ್ಲಿ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು ಘಟಕದ ಆವರಣದಲ್ಲಿದ್ದ 11 ಇಂಧನ ಟ್ಯಾಂಕ್‌ಗಳಿಗೆ ಬೆಂಕಿ ಹತ್ತಿಕೊಂಡಿದ್ದು ಅದರಲ್ಲಿ 6 ಸ್ಫೋಟವಾಗಿ ಛಿದ್ರಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟಕದಲ್ಲಿ ಒಟ್ಟು 15 ತೈಲ ಸಂಗ್ರಹಣಾ ಟ್ಯಾಂಕ್ಗಳಿದ್ದವು ಎಂದು ತಿಳಿದುಬಂದಿದೆ.
ಘಟಕದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ತೈಲ ಹಾಗೂ ಕಚ್ಚಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ನಡೆದಾಗ ಘಟಕದಲ್ಲಿ 10-15 ನೌಕರರು ಕೆಲಸ ಮಾಡುತ್ತಿದ್ದರು. ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಭಾರತದಲ್ಲೇ ಅತಿ ದೊಡ್ಡ ಜೈವಿಕ ಡೀಸೆಲ್ ತಯಾರಿಕಾ ಘಟಕವಾಗಿರುವ ಬಯೋಮ್ಯಾಕ್ಸ್ ವಾರ್ಷಿಕ 5 ಲಕ್ಷ ಟನ್ ಡೀಸೆಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .