Webdunia - Bharat's app for daily news and videos

Install App

ಸಿಗ್ನಲ್ ಜಂಪ್ ಮಾಡಿದ್ದಕ್ಕೆ ಅಪ್ಪನ ವಿರುದ್ಧ ದೂರು ನೀಡಿದ ಪೋರ

Webdunia
ಶುಕ್ರವಾರ, 3 ಜೂನ್ 2016 (10:08 IST)
ಮಕ್ಕಳು ತಮ್ಮ ತಂದೆ-ತಾಯಿಗಳನ್ನು, ಹಿರಿಯರನ್ನು ಅನುಸರಿಸುವುದು ಸಾಮಾನ್ಯ. ಅವರಿಗೆ ಹೇಳಿ ಕೊಡುವ ನೀತಿ ಪಾಠವನ್ನು ನಾವು ಸಹ ಅನುಸರಿಸುವುದು ಅಷ್ಟೇ ಮುಖ್ಯವಾಗುತ್ತದೆ. ಇಲ್ಲವಾದರೆ ಮಕ್ಕಳದನ್ನು ಪ್ರಶ್ನಿಸುತ್ತಾರೆ. ವಿರೋಧಿಸುತ್ತಾರೆ. ಅದಕ್ಕೊಂದು ಅತ್ಯುತ್ತಮ ಉದಾಹರಣೆ ಇಲ್ಲಿದೆ.

ಅಮೆರಿಕದ ಮ್ಯಾಸೆಚ್ಯೂಸೆಟ್ಸ್‍ನಲ್ಲಿ 6 ವರ್ಷದ ಬಾಲಕನೊಬ್ಬ ತನ್ನ ತಂದೆಯ ಸಿಗ್ನಲ್ ಜಂಪ್ ಮಾಡಿದನೆಂದು ಪೊಲೀಸರಲ್ಲಿ ದೂರು ನೀಡಿದ್ದಾನೆ. ಈ ಮೂಲಕ ತನಗೆ ಪಾಠ ಹೇಳಿದ್ದ ಅಪ್ಪನಿಗೆ ತಕ್ಕ ಪಾಠ ಕಲಿಸಿದ್ದಾನೆ.
 
ಅಪ್ಪನ ಜತೆ ಕಾರಿನಲ್ಲಿ ಹೋಗುತ್ತಿದ್ದ ರೂಬಿ ರಿಚರ್ಡಸನ್ ರಸ್ತೆಯಲ್ಲಿ ರೆಡ್ ಸಿಗ್ನಲ್ ಕಂಡಾಗ ತನ್ನ ತಂದೆ ಮೈಕಲ್ ರಿಚರ್ಡ್‍ಸನ್  ಕಾರ್ ನಿಲ್ಲಿಸುತ್ತಾನೆ ಎಂದುಕೊಂಡಿದ್ದ. ಆದರೆ ತನ್ನ ತಂದೆ ಹಾಗೆ ಮಾಡದಿದ್ದಾಗ ಅಪ್ಪ ನೀನು ಸಿಗ್ನಲ್ ಜಂಪ್ ಮಾಡಿದ್ದೀಯ. ನಾನು ಪೊಲೀಸರಿಗೆ ಕರೆ ಮಾಡುತ್ತೇನೆ ಎಂದಿದ್ದಾನೆ. ಮನೆಗೆ ಹೋದ ತಕ್ಷಣ ಅವನು ಮೊದಲು ಮಾಡಿದ್ದು ಅದೇ ಕೆಲಸ. ಪೊಲೀಸರಿಗೆ ದೂರವಾಣಿ ಕರೆ ಮಾಡಿ ಅಪ್ಪ ಮಾಡಿದ ತಪ್ಪನ್ನು ವಿವರಿಸಿದ. ಹೀಗಾಗಿ ಮೈಕಲ್ ರಿಚರ್ಡ್‍ಸನ್ ಪೊಲೀಸರಲ್ಲಿ ಕ್ಷಮೆ ಕೇಳುವಂತಾಯಿತು. 
 
ಏನೂ ಅರಿಯದ ಈ ವಯಸ್ಸಿನಲ್ಲಿ ಇಷ್ಟು ಪ್ರಾಮಾಣಿಕತೆ ಕೋರುವ ಮುದ್ದು ಬಾಲಕ ರೂಬಿ ತಾನು ಮುಂದೆ ಪೊಲೀಸ್ ಅಧಿಕಾರಿಯಾಗುತ್ತೇನೆ ಎನ್ನುತ್ತಾನೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಬಿಜೆಪಿ ರಾಜಾಧ್ಯಕ್ಷ ನೇಮಕ ವಿಳಂಬದ ಹಿಂದಿನ ಕಾರಣ ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್

ಶೋಷಿತರನ್ನು ಮತಬ್ಯಾಂಕ್ ಮಾಡಿ ವಂಚಿಸುತ್ತ ಬಂದ ಕಾಂಗ್ರೆಸ್ ಪಕ್ಷ: ವಿಜಯೇಂದ್ರ

Video: ಆಪರೇಷನ್ ಸಿಂಧೂರ್ ಚರ್ಚೆ ವೇಳೆ ಸಂಸತ್ತಿನಲ್ಲಿ ರಾಜನಾಥ್ ಸಿಂಗ್, ರಾಹುಲ್ ಗಾಂಧಿ ವಾಗ್ಯುದ್ಧ

ಮುಂದಿನ ಸುದ್ದಿ
Show comments