Webdunia - Bharat's app for daily news and videos

Install App

'ಪಾಕಿಸ್ತಾನವನ್ನು ಸರ್ವನಾಶ ಮಾಡಿ' ಹುತಾತ್ಮ ಯೋಧನ ಪತ್ನಿಯ ಮನವಿ

Webdunia
ಶನಿವಾರ, 29 ಅಕ್ಟೋಬರ್ 2016 (18:01 IST)
ಚಂಡಿಗಡ: 'ಪಾಕಿಸ್ತಾನಕ್ಕೆ ಬುದ್ದಿ ಹೇಳಿ, ಒಂದು ವೇಳೆ ಮಾತು ಕೇಳದಿದ್ದರೆ ಪಾಕಿಸ್ತಾನವನ್ನು ಸರ್ವನಾಶ ಮಾಡಿಬಿಡಿ' ಇಂತಹದ್ದೊಂದು ಮಾತನ್ನು ಪ್ರಧಾನಿ ಮೋದಿಗೆ ಮನವಿ ಮಾಡಿಕೊಳ್ಳಲಾಗಿದೆ. ಯಾರೋ ಒಬ್ಬರು ವಿನಂತಿಸಿಕೊಂಡಿದ್ದಾರೆ ಎಂದರೆ ಸುಮ್ಮನಾಗಬಹುದಿತ್ತು. ಆದರೆ ಆ ಮಾತು ಹೊರಹೊಮ್ಮಿದ್ದು ಒಂದು ದಿನದ ಹಿಂದಷ್ಟೇ ಹುತಾತ್ಮನಾದ ಯೋಧ ಮನದೀಪ್ ಅವರ ಪತ್ನಿಯಿಂದ ..! 
 

 
ಭಾರತ ಪಾಕ್ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಗುಂಡಿನ ಕಾಳಗ ನಿರಂತರವಾಗಿದ್ದು, ಎರಡೂ ರಾಷ್ಟ್ರದ ಸೈನಿಕರು ಸಾವನಪ್ಪುತ್ತಿದ್ದಾರೆ. ಸರ್ಜಿಕಲ್ ಆಪರೇಶನ್ ಆದ ನಂತರ ಪಾಕ್ ಸೈನಿಕರು ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದಾರೆ. ಅದರಲ್ಲೂ ಕಳೆದ ಅದರಲ್ಲೂ ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಭಾರತದ ಮೂವರು ಸೈನಿಕರು ಪಾಕಿಗಳ ಗುಂಡಿಗೆ ಬಲಿಯಾಗಿದ್ದಾರೆ. ಅದರಲ್ಲಿ ಕುರುಕ್ಷೇತ್ರದ ಸೈನಿಕ ಮನದೀಪ್ ಅವರು ಒಬ್ಬರು. ಅವರ ಪ್ರಾರ್ಥೀವ ಶರೀರವನ್ನು ಶನಿವಾರ ತವರೂರಿಗೆ ತಂದು, ಸರಕಾರಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
 
ಸಂದರ್ಭದಲ್ಲಿ ಮಾತನಾಡಿದ ಹುತಾತ್ಮ ಯೋಧನ ಪತ್ನಿ, ಇತ್ತೀಚೆಗೆ ಕದನ ವಿರಾಮ ಸಾಕಷ್ಟು ನಡೆಯುತ್ತಿದೆ. ಎಷ್ಟೇ ಎಚ್ಚರಿಕೆ ನೀಡಿದರೂ ಪಾಕಿಸ್ತಾನ ಎಚ್ಚೆತ್ತುಕೊಳ್ಳುತ್ತಿಲ್ಲ. ಒಬ್ಬರ ಮೇಲೊಬ್ಬ ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಸಂಭ್ರಮದ ಬೆಳಕಿನ ದೀಪಾವಳಿ ಸೈನಿಕರ ಕುಟುಂಬಕ್ಕೆ ಅಂಧಃಕಾರದ ದೀಪಾವಳಿಯಾಗಿ ಮಾರ್ಪಡುತ್ತಿದೆ. ಇದಕ್ಕೆಲ್ಲ ತಾರ್ಕಿಕ ಅಂತ್ಯ ಹಾಡಬೇಕೆಂದರೆ ಪಾಕಿಸ್ತಾನಕ್ಕೆ ಬುದ್ಧಿ ಮಾತು ಹೇಳಿ ಸುಮ್ಮನಾಗಿಸಬೇಕು. ಇಲ್ಲದಿದ್ದರೆ ಅದನ್ನು ಸರ್ವನಾಶ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಗಂಭೀರ ಚಿಂತನೆ ಮಾಡಬೇಕು ಎಂದು, ದುಃಖದ ನಡುವಿನಲ್ಲೂ ಆಕ್ರೋಶದ ನುಡಿಯನ್ನಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments