Select Your Language

Notifications

webdunia
webdunia
webdunia
webdunia

ಪತ್ನಿಯನ್ನು ನಗ್ನಸ್ಥಿತಿಯಲ್ಲಿ ಎಳೆದುಕೊಂಡು ಹೋದ ಪತಿರಾಯ

ಪತ್ನಿಯನ್ನು ನಗ್ನಸ್ಥಿತಿಯಲ್ಲಿ ಎಳೆದುಕೊಂಡು ಹೋದ ಪತಿರಾಯ
ನಿಜಾಮಾಬಾದ್ , ಗುರುವಾರ, 23 ಅಕ್ಟೋಬರ್ 2014 (15:20 IST)
ತೆಲಂಗಾಣದ ನಿಜಾಮಾಬಾದ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ ಪತಿ ತನ್ನ 26 ವರ್ಷ ವಯಸ್ಸಿನ ಪತ್ನಿಗೆ ಚಾಕು ತೋರಿಸಿ ಅವಳನ್ನು ನಗ್ನಸ್ಥಿತಿಯಲ್ಲಿ ಪೆರೇಡ್ ಮಾಡಿಸಿದ ಅಮಾನವೀಯ ಘಟನೆ ವರದಿಯಾಗಿದೆ.
 
 ವ್ಯಕ್ತಿ ತನ್ನ ಪತ್ನಿಯ ಕೂದಲು ಹಿಡಿದು ಸುಮಾರು ಒಂದು ಕಿಮೀ ದೂರದವರೆಗೆ ಎಳೆದುಕೊಂಡು ಹೋದಾಗ ಸಂಪೂರ್ಣ ಕುಡಿದ ಮತ್ತಿನಲ್ಲಿದ್ದ. ದಾರಿಹೋಕರು ತಡೆಯಲು ಪ್ರಯತ್ನಿಸಿದ ಅವರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ.
 
 ತಾನು ಕದ್ದ ಮಾಲನ್ನು ಮಾರುವುದಕ್ಕೆ ಪತ್ನಿ ಜೊತೆಗೂಡದಿದ್ದಾಗ ಆ ವ್ಯಕ್ತಿ ಪತ್ನಿಯನ್ನು ಈ ರೀತಿಯಾಗಿ ಹಿಂಸಿಸಿದ್ದ.
 
ಆ ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಅವನ ಮೇಲೆ ಬಿದ್ದು ಬಂಧಿಸಿದರು. ಪತ್ನಿಯ ಹತ್ಯೆ ಪ್ರಯತ್ನದ ಆರೋಪವನ್ನು ಅವನ ವಿರುದ್ಧ ಹೊರಿಸಲಾಗಿದೆ. 

Share this Story:

Follow Webdunia kannada