Webdunia - Bharat's app for daily news and videos

Install App

ನಾನು ಭಾರತೀಯಳು, ಸಾಯಿವವರೆಗೆ ಭಾರತೀಯಳಾಗಿರುತ್ತೇನೆ: ಸಾನಿಯಾ ಮಿರ್ಜಾ

Webdunia
ಗುರುವಾರ, 24 ಜುಲೈ 2014 (15:31 IST)
ತೆಲಂಗಾಣ ರಾಯಭಾರಿಯಾಗಿ ನೇಮಕಗೊಂಡ ಸಾನಿಯಾ ಮಿರ್ಜಾ ವಿರುದ್ಧ ವರದಿಯಾಗುತ್ತಿರುವ ಆರೋಪಗಳು ನನಗೆ ತುಂಬಾ ನೋವು ತಂದಿದೆ. ನಾನು ಭಾರತೀಯಳಾಗಿದ್ದು ಸಾಯಿವವರೆಗೆ ಭಾರತೀಯಳಾಗಿರುತ್ತೇನೆ ಎಂದು ಹೇಳಿದ್ದಾರೆ.
 
ತೆಲಂಗಾಣದ ರಾಯಭಾರಿಯಾಗಿ ಸಾನಿಯಾರನ್ನು ಆಯ್ಕೆ ಮಾಡಿದ ಒಂದು ದಿನದ ನಂತರ ಆಕೆ ಸ್ಥಳೀಯಳಲ್ಲ ಮತ್ತು ಪಾಕಿಸ್ತಾನದ ಸೊಸೆಯಾಗಿದ್ದರಿಂದ ಅವರನ್ನು ನೇಮಕ ಮಾಡಿರುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದರು.
 
ಹೈದ್ರಾಬಾದ್ ಮೂಲವನ್ನು ಬಿಚ್ಚಿಟ್ಟ ಸಾನಿಯಾ, ತಮ್ಮ ಹಿರಿಯರು ಇಲ್ಲಿಯೇ ವಾಸವಾಗಿದ್ದರಿಂದ ನಾನು ಇಲ್ಲಿಯೇ ಬೆಳೆದಿದ್ದೇನೆ. ಪಾಕಿಸ್ತಾನ ಮೂಲದ ಕ್ರಿಕೆಟಿಗ ಶೋಯಿಬ್ ಮಲಿಕ್ ಅವರನ್ನು ವಿವಾಹವಾಗಿದ್ದರಿಂದ ನಾನು ಭಾರತೀಯಳಲ್ಲ ಎನ್ನಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ನಾನು ಹೈದ್ರಾಬಾದ್ ಮೂಲದವಳಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆಯನ್ನು ಸಾನಿಯಾ ತೀವ್ರವಾಗಿ ಖಂಡಿಸಿದ್ದಾರೆ.
 
ಆರೋಪಗಳ ಬಗ್ಗೆ ಉತ್ತರಿಸಿದ ಸಾನಿಯಾ, ನಾನು ಮುಂಬೈಯಲ್ಲಿ ಜನಿಸಿದ್ದೇನೆ ನನ್ನ ತಾಯಿಯ ಚಿಕಿತ್ಸೆಗಾಗಿ ಹೈದ್ರಾಬಾದ್‌ಗೆ ವಲಸೆ ಬಂದಿದ್ದೇವೆ. ನಾನು ಹೈದ್ರಾಬಾದ್‌ಗೆ ಬಂದಾಗ ಕೇವಲ 3 ವಾರದ ಶಿಶುವಾಗಿದ್ದೆ ಎಂದು ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments