Webdunia - Bharat's app for daily news and videos

Install App

ಶೀಘ್ರದಲ್ಲಿಯೇ ನಿವೃತ್ತಿಯಾಗುವ ಯೋಚನೆಯಿಲ್ಲ: ಮನೋಹರ್ ಪಾರಿಕ್ಕರ್

Webdunia
ಸೋಮವಾರ, 30 ನವೆಂಬರ್ 2015 (16:38 IST)
ಶೀಘ್ರದಲ್ಲಿಯೇ ನಿವೃತ್ತಿಯಾಗುವ ಬಗ್ಗೆ ಯೋಚಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ನೀಡಿದ ಗುರಿಯನ್ನು ಮುಕ್ತಾಯಗೊಳಿಸಿ ಗೋವಾಕ್ಕೆ ಮರಳುತ್ತೇನೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪಾರಿಕ್ಕರ್ ಹೇಳಿದ್ದಾರೆ. 
 
ಸಚಿವ ಮನೋಹರ್ ಪಾರಿಕ್ಕರ್‌ಗೆ ಮುಂಬರುವ ಡಿಸೆಂಬರ್ 13 ಕ್ಕೆ 60 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನುವ ಮಾಧ್ಯಮ ವರದಿಗಳಿಂದಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
 
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಅಥವಾ ತಿರುಚಲಾಗಿದೆ. ನಾನು ನಿವೃತ್ತಿಯಾಗುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ ಪಾರಿಕ್ಕರ್ ಟ್ವೀಟ್ ಮಾಡಿ, 60 ವರ್ಷಗಳಾದ ನಂತರ ಸಾಮಾನ್ಯ ಜನತೆ ನಿವೃತ್ತಿಯ ಬಗ್ಗೆ ಯೋಚಿಸುತ್ತಾರೆ. ನಾನು ಕೂಡಾ ಅದೇ ರೀತಿ ಯೋಚಿಸುತ್ತೇನೆ. ಆದರೆ, ಕೇಂದ್ರ ಸರಕಾರದಲ್ಲಿ ನನಗೆ ನೀಡಿರುವ ಹೊಣೆಯನ್ನು ಮುಕ್ತಾಯಗೊಳಿಸಿ ನಂತರ ಗೋವಾಗೆ ಮರಳುತ್ತೇನೆ ಎಂದು ಹೇಳಿದ್ದರು.
 
ಕೇಂದ್ರದ ರಕ್ಷಣಾ ಸಚಿವರಾಗಿ ಒಂದು ವರ್ಷ ಪೂರೈಸಿದ ಪಾರಿಕ್ಕರ್ ಅವರಿಗೆ ಸೇನಾಪಡೆಗಳನ್ನು ಆಧುನೀಕರಣಗೊಳಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತರುವ ಹೊಣೆ ನೀಡಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments