Webdunia - Bharat's app for daily news and videos

Install App

ಕರ್ತವ್ಯದಲ್ಲಿದ್ದಾಗ ಚಲನಚಿತ್ರ ವೀಕ್ಷಣೆ; ರೆಡ್ ಹ್ಯಾಂಡ್ ಆಗಿ ಹಿಡಿದ ಸಚಿವ ಸಿಸೋಡಿಯಾ

Webdunia
ಗುರುವಾರ, 18 ಆಗಸ್ಟ್ 2016 (17:33 IST)
ದೆಹಲಿ ಸರ್ಕಾರಿ ಆಸ್ಪತ್ರೆಗೆ ಅಚಾನಕ್ ಆಗಿ ಭೇಟಿ ನೀಡಿದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅಲ್ಲಿನ ಅವ್ಯವಸ್ಥತೆ ಕಂಡು ಗರಂ ಆದ ಸನ್ನಿವೇಶ ಕಂಡು ಬಂತು. ರೋಗಿಗಳು ಸಾಲುಗಟ್ಟಿ ನಿಂತಿದ್ದರೂ ಕೆಲ ಸಿಬ್ಬಂದಿ ಅವರಿಗೆ ಸಹಕರಿಸುತ್ತಿರಲಿಲ್ಲ, ಅದರಲ್ಲೂ ಒಬ್ಬ ಉದ್ಯೋಗಿ ಕಂಪ್ಯೂಟರ್‌ನಲ್ಲಿ ಸಿನಿಮಾ ವೀಕ್ಷಿಸುವುದರಲ್ಲಿಯೇ ಬ್ಯುಸಿಯಾಗಿದ್ದರು . ಇದನ್ನು ಕಂಡ ಸಚಿವರು ಕೆಂಡಾಮಂಡಲರಾದರು.  
 
ಸಿನಿಮಾ ವೀಕ್ಷಿಸುತ್ತಿದ್ದ ಉದ್ಯೋಗಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಸಚಿವರು ಆತನ ಸುಪರ್‌ವೈಸರ್ ಮುಂದೆ ಎಳೆದೊಯ್ದು ತರಾಟೆಗೆ ತೆಗೆದುಕೊಂಡರು. ಈ ಹೊಣೆಗೇಡಿತನದ ಧೋರಣೆಗೆ ಪ್ರತಿಯಾಗಿ ಆತನನ್ನು ಕೆಲಸದಿಂದ ಅಮಾನತು ಮಾಡುವಂತೆ ಸಹ ಅವರು ಆದೇಶಿಸಿದರು. 
 
ಈ ಘಟನೆಯ ದೃಶ್ಯಾವಳಿಗಳು ವಿಡಿಯೋದಲ್ಲಿ ಸೆರೆಯಾಗಿದ್ದು ಆಮ್ ಆದ್ಮಿ ಪಕ್ಷದ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಆಗಿದೆ. ವಿಡಿಯೋವನ್ನು 2,000 ಜನ ಹಂಚಿಕೊಂಡಿದ್ದು, ದೆಹಲಿ ಸರ್ಕಾರದ ಕಾರ್ಯಸಾಧನೆಯನ್ನು ಮೆಚ್ಚಿ ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಉದ್ಯೋಗಿ, ಉಪ ಮುಖ್ಯಮಂತ್ರಿ ಬಳಿ ಕ್ಷಮಿಸುವಂತೆ ಮೊರೆ ಇಡುತ್ತಿರುವುದು ಕಂಡು ಬಂದಿದ್ದು, ಆತನ ಮಾತಿಗೆ ಗಮನ ಕೊಡದ ಸಿಸೋಡಿಯಾ ನಿನ್ನ ಸುಪರ್‌ವೈಸರ್ ಬಳಿ ಮಾತನಾಡುವಂತೆ ಹೇಳಿ ಅಲ್ಲಿಂದ ಮರಳಿದ್ದಾರೆ. 
 
ಸಾರ್ವಜನಿಕ ಸೇವೆ ಸಾಮಾನ್ಯ ಮನುಷ್ಯನಿಗೂ ಸಿಗುವಂತಾಗುವುದನ್ನು ಖಚಿತ ಪಡಿಸಿಕೊಳ್ಳುವ ಉದ್ದೇಶದಿಂದ ದೆಹಲಿ ಸರ್ಕಾರದ ಹಲವು ಸಚಿವರು ವಿವಿಧ ಇಲಾಖೆಗಳಲ್ಲಿ ಅನಿರೀಕ್ಷಿತ ತಪಾಸಣೆಯನ್ನು ಕೈಗೊಳ್ಳುತ್ತಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

Karnataka Weather: ಬೆಂಗಳೂರಿಗರಿಗೂ ಎಚ್ಚರ, ರಾಜ್ಯದ ಹವಾಮಾನ ಪರಿಸ್ಥಿತಿ ಹೇಗಿದೆ ನೋಡಿ

ಮುಂದಿನ ಸುದ್ದಿ
Show comments