Webdunia - Bharat's app for daily news and videos

Install App

ಪಾರಂಪರಿಕ ಸ್ಥಾನ ಪಡೆದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು

Webdunia
ಸೋಮವಾರ, 6 ಜುಲೈ 2015 (16:17 IST)
100ಕ್ಕೂ ಅಧಿಕ ವರ್ಷಗಳಷ್ಟು ಹಳೆಯದಾದ ದೇಶದ 19 ಕಾಲೇಜುಗಳಿಗೆ ವಿಶ್ವ ವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಪಾರಂಪರಿಕ ಸ್ಥಾನ ನೀಡಿದೆ. ಅದರಲ್ಲಿ ನಮ್ಮ ರಾಜ್ಯದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಸಹ ಸೇರಿದೆ. 
 
ಪಾರಂಪರಿಕ ಸ್ಥಾನದ ಹೆಗ್ಗಳಿಕೆಯ ಜತೆಗೆ ಇದು ರವೀಂದ್ರ ಕಲಾ ಭವನವದ ನವೀಕರಣಕ್ಕೆ ಆಯೋಗದಿಂದ (ಯುಜಿಸಿ) ರೂಪಾಯಿ 1.83 ಕೋಟಿ ಆರ್ಥಿಕ ನೆರವು ಪಡೆದಿದೆ. 
 
ಕಾಟನ್ ಕಾಲೇಜ್, ಗೌಹಾತಿ; ಫರ್ಗ್ಯೂಸನ್ ಕಾಲೇಜು, ಪುಣೆ; ಸಂತ ಜೋಸೆಫ್ (ಎ) ಕಾಲೇಜು, ತಮಿಳುನಾಡು; ಖಾಲ್ಸ ಕಾಲೇಜ್, ಪಂಜಾಬ್; ಮತ್ತು ಬಿಹಾರದ ಲಂಗತ್ ಸಿಂಗ್ ಪಾರಂಪರಿಕ ಸ್ಥಾನ ಮತ್ತು ಅಭಿವೃದ್ಧಿ ನಿಧಿ ಪಡೆದ ಇತರ 19 ಕಾಲೇಜುಗಳಲ್ಲಿ ಸೇರಿವೆ. 
 
ಸೇಂಟ್ ಕ್ಸೇವಿಯರ್ಸ್ ಕಾಲೇಜ್, ಸೇಂಟ್ ಅಲೋಶಿಯಸ್ (ಎ) ಕಾಲೇಜ್ ಮಂಗಳೂರು ಮತ್ತು ಸೇಂಟ್ ಜೋಸೆಫ್ಸ್ (ಎ) ಕಾಲೇಜ್ ಬೆಂಗಳೂರು  ಸೇರಿದಂತೆ ವಿವಿಧ ರಾಜ್ಯಗಳ ಇತರ 39 ಉನ್ನತ ಶೈಕ್ಷಣಿಕ ಸಂಸ್ಥೆಗಳು ಪಾರಂಪರಿಕ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಆದರೆ ಇವುಗಳ ಅರ್ಜಿ ತಿರಸ್ಕೃತಗೊಂಡಿವೆ. 
 
‘ಸಂರಕ್ಷಣೆ, ಏಳಿಗೆಗೆ ನಿಧಿ ಮತ್ತು ಪಾರಂಪರಿಕ ಸ್ಥಾನ ಪಡೆಯುವ ಉದ್ದೇಶದೊಂದಿಗೆ ಉನ್ನತ ಶಿಕ್ಷಣ ನಿಯಂತ್ರಕ (ಯುಜಿಸಿ)ಕ್ಕೆ ದೇಶದ ವಿವಿಧ ರಾಜ್ಯಗಳ ಒಟ್ಟು 60 ಕಾಲೇಜುಗಳಿಂದ ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 19 ಕಾಲೇಜುಗಳನ್ನು ಯುಜಿಸಿ ಆಯ್ಕೆ ಮಾಡಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments