Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟ ಅಕ್ಷಯ್ ಕುಮಾರ್‌ ಸ್ಟಂಟ್‌ ಮಾಡಲು ಹೋಗಿ ವಿಮಾನದಿಂದ ಹಾರಿದ ಭೂಪ

ಬಾಲಿವುಡ್ ನಟ ಅಕ್ಷಯ್ ಕುಮಾರ್‌ ಸ್ಟಂಟ್‌ ಮಾಡಲು ಹೋಗಿ ವಿಮಾನದಿಂದ ಹಾರಿದ ಭೂಪ
ಮುಂಬೈ , ಸೋಮವಾರ, 30 ಮಾರ್ಚ್ 2015 (13:52 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್‌ ಸ್ಟಂಟ್‌ ಮಾಡಲು ವಿಮಾನದ ತುರ್ತುನಿರ್ಗಮನ ದ್ವಾರವನ್ನು ತೆಗೆದಿರುವುದಾಗಿ ಬಂಧಿತ ಆರೋಪಿ ಆಕಾಶ್ ಜೈನ್ ಹೇಳಿಕೆ ನೀಡಿದ್ದೇನೆ.  

ವಿಮಾನ 15 ಅಡಿ ಎತ್ತರದಲ್ಲಿ ಹಾರುತ್ತಿರುವಾಗ ತುರ್ತುನಿರ್ಗಮನ ದ್ವಾರ ತೆರೆದ ಆರೋಪಿ ಆಕಾಶ್ ಜೈನ್ ಸಿನೆಮಾದ ಹಿರೋನಂತೆ ಅಲ್ಲಿಂದ ಜಂಪ್ ಮಾಡಿದ್ದ.

ನಾನು ಬಾಲಿವುಡ್ ನಟ ಅಕ್ಷಯ ಕುಮಾರ್ ಫ್ಯಾನ್ ಆಗಿದ್ದರಿಂದ ಅವರಂತೆ ವಿಮಾನದಿಂದ ಕಳಗೆ ಹಾರಲು ಪ್ರಯತ್ನಿಸಿದೆ ಎಂದು 30 ವರ್ಷ ವಯಸ್ಸಿನ ಆಕಾಶ್ ಜೈನ್ ಪೊಲೀಸರಿಗೆ ತಿಳಿಸಿದ್ದಾನೆ.

ಜೈನ್ ವೃತ್ತಿಯಲ್ಲಿ ಮೆಡಿಕಲ್ ರಿಪ್ರೆಸೆಂಟೇಟಿವ್ ಆಗಿದ್ದು ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ಏಪ್ರಿಲ್ 4 ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಆರೋಪಿ ಆಕಾಶ್ ಜೈನ್ ವಿರುದ್ಧ ಪೊಲೀಸರು ಸೆಕ್ಷನ್ 336 ವಿಮಾನ ನಿಲ್ದಾಣ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಸೂಕ್ತ ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada