Select Your Language

Notifications

webdunia
webdunia
webdunia
webdunia

ಕಚ್ಚಾ ಬಾಂಬ್‌ನಿಂದ ಪತ್ನಿ ಹತ್ಯೆಗೈಯಲು ಬಂದ, ಬಾಂಬ್ ಸ್ಫೋಟಿಸಿ ತಾನೇ ಸತ್ತ

ಕಚ್ಚಾ ಬಾಂಬ್‌ನಿಂದ ಪತ್ನಿ ಹತ್ಯೆಗೈಯಲು ಬಂದ, ಬಾಂಬ್ ಸ್ಫೋಟಿಸಿ ತಾನೇ ಸತ್ತ
ಫೈಜಾಬಾದ್ , ಶನಿವಾರ, 25 ಅಕ್ಟೋಬರ್ 2014 (15:22 IST)
ವಿಚ್ಚೇದಿತ ಪತ್ನಿಯನ್ನು ಹತ್ಯೆಗೈಯುವ ಉದ್ದೇಶದಿಂದ ಜೇಬಿನಲ್ಲಿ ಕಚ್ಚಾ ಬಾಂಬ್‌ಗಳನ್ನು ಹೊತ್ತು ತರುತ್ತಿದ್ದ ವ್ಯಕ್ತಿಯೊಬ್ಬನ ಅದೃಷ್ಟ ಕೈಕೊಟ್ಟಿತ್ತು. ಜೇಬಿನಲ್ಲಿರಿಸಿಕೊಂಡಿದ್ದ ಕಚ್ಚಾ ಬಾಂಬ್ ಸ್ಫೋಟಿಸಿದ್ದರಿಂದ ಸ್ಥಳದಲ್ಲಿಯೇ ಆತ ಸಾವನ್ನಪ್ಪಿದ ಘಟನೆ ವರದಿಯಾಗಿದೆ.  
 
ಪೊಲೀಸ್ ಮೂಲಗಳ ಪ್ರಕಾರ, ವಿನಯ್ ಕುಮಾರ್ ಎಂಬಾತ ಫೈಜಾಬಾದ್ ಜಿಲ್ಲೆಯ ದೇವಕಲಿ ಗ್ರಾಮದಲ್ಲಿರುವ ಪತ್ನಿ ಶಾಲಿನಿಯನ್ನು ಹತ್ಯೆಗೈಯುವ ಉದ್ದೇಶದಿಂದ ಎರಡು ಕಚ್ಚಾ ಬಾಂಬ್‌ಗಳನ್ನು ಆಕೆ ವಾಸಿಸುತ್ತಿದ್ದ ಮನೆಯ ಮೇಲೆ ಎಸೆದ. ಒಂದು ಕಚ್ಚಾ ಬಾಂಬ್ ಗೋಡೆಗೆ ಅಪ್ಪಳಿಸಿದರೆ ಮತ್ತೊಂದು ಬಾಂಬ್‌ ಸ್ಫೋಟಗೊಳ್ಳಲಿಲ್ಲ.
 
ಆರೋಪಿ ಎಸೆದ ಒಂದು ಕಚ್ಚಾ ಬಾಂಬ್‌ ಸ್ಫೋಟಗೊಂಡಿದ್ದರಿಂದ ಶಾಲಿನಿ ಮತ್ತು ಆಕೆಯ ಕುಟುಂಬದವರು ಆತನ ಬೆನ್ನು ಹತ್ತಿದ್ದಾರೆ. ಆರೋಪಿ ಓಡುವಾಗ ಆಯ ತಪ್ಪಿ ಬಿದ್ದಿದ್ದಾನೆ. ಆಯ ತಪ್ಪಿ ಬಿದ್ದಾಗ ಆತನ ಜೇಬಿನಲ್ಲಿದ್ದ ಮತ್ತೊಂದು ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  
 
ಕೆಲ ಕೌಟಂಬಿಕ ಸಮಸ್ಯೆಗಳಿಂದಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯನ್ನು ಹತ್ಯೆಗೈಯಬೇಕು ಎನ್ನುವ ಷಡ್ಯಂತ್ರ ಆರೋಪಿ ವಿನಯ್ ಕುಮಾರ್‌ ರೂಪಿಸಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada