Select Your Language

Notifications

webdunia
webdunia
webdunia
webdunia

ಗರ್ಭಿಣಿ ಸೊಸೆಯ ಮೇಲೆ ಮಾವನಿಂದ ನಿರಂತರ ಅತ್ಯಾಚಾರ

ಗರ್ಭಿಣಿ ಸೊಸೆಯ ಮೇಲೆ ಮಾವನಿಂದ ನಿರಂತರ ಅತ್ಯಾಚಾರ
ಚಂದೀಗಡ್ , ಶುಕ್ರವಾರ, 11 ಮಾರ್ಚ್ 2016 (12:58 IST)
ಗರ್ಭಿಣಿ ಸೊಸೆಯ ಮೇಲೆ ಮಾವನೇ ಅತ್ಯಾಚಾರ ಎಸಗಿರುವ ಹೇಯ ಘಟನೆ ಹರಿಯಾಣಾದಲ್ಲಿ ನಡೆದಿದೆ.
 
ಜಗ್ಧಾರಿ ಗ್ರಾಮದ ನಿವಾಸಿಯಾಗಿರುವ ಮಹಿಳೆ ತನ್ನ ಮೇಲಾದ ದೌರ್ಜನ್ಯದ ವಿರುದ್ಧ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತನ್ನ ಪತಿಯ ತಂದೆ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಮತ್ತು ಗರ್ಭಿಣಿಯಾಗಿದ್ದ ನನಗೆ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಪೀಡಿತೆ ದೂರಿದ್ದಾಳೆ. 
 
ಜತೆಗೆ ತನ್ನ ಅತ್ತೆ ಮತ್ತು ನಾದಿನಿ ನನ್ನ ಮೇಲೆ ಶೋಷಣೆ ನಡೆಸಿದ್ದಾರೆ. ಅವರನ್ನು ಶಿಕ್ಷಿಸಿ ಎಂದು ಆಕೆ ಮನವಿ ಮಾಡಿಕೊಂಡಿದ್ದಾಳೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಪರಶೀಲನೆ ನಡೆಸುತ್ತಿದ್ದಾರೆ. 
 

Share this Story:

Follow Webdunia kannada