Select Your Language

Notifications

webdunia
webdunia
webdunia
webdunia

ಪತ್ನಿಗೆ ಜೀವನಾಂಶವಾಗಿ 10 ಸಾವಿರ ರೂ. ಚಿಲ್ಲರೆ ನಾಣ್ಯ ತಂದು ಸುರಿದ ಪತಿ ಮಹಾಶಯ

ಪತ್ನಿಗೆ ಜೀವನಾಂಶವಾಗಿ 10 ಸಾವಿರ ರೂ. ಚಿಲ್ಲರೆ ನಾಣ್ಯ ತಂದು ಸುರಿದ ಪತಿ ಮಹಾಶಯ
ಅಹ್ಮದಾಬಾದ್ , ಗುರುವಾರ, 29 ಅಕ್ಟೋಬರ್ 2015 (15:58 IST)
ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಗೆ ಮಾಸಿಕವಾಗಿ ಜೀವನಾಂಶ ನೀಡುವ ಕೌಟಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ಆಕ್ರೋಶಗೊಂಡ ಪತಿ ಮಹಾಶಯ, 10 ಸಾವಿರ ರೂಪಾಯಿಗಳ ಚಿಲ್ಲರೆ ನಾಣ್ಯವನ್ನು ತಂದು ಪತ್ನಿಗೆ ನೀಡಿ ಪ್ರತಿಭಟನೆ ತೋರಿರುವ ವಿಚಿತ್ರ ಘಟನೆ ವರದಿಯಾಗಿದೆ.
 
ಪತಿ ಪ್ರುಥ್ವಿ ಪ್ರಜಾಪತಿ 10 ಸಾವಿರ ರೂಪಾಯಿಗಳ ಚಿಲ್ಲರೆ ನಾಣ್ಯಗಳಿರುವ ಬ್ಯಾಗ್‌ನೊಂದಿಗೆ ಕೌಟಂಬಿಕ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಲಯದಲ್ಲಿದ್ದ ಪತ್ನಿ ರಾಮಿಲಾಬೆನ್‌ಗೆ ಹಣವನ್ನು ಎಣಿಸುವಂತೆ ಒತ್ತಾಯಿಸಿದ್ದಾನೆ. ಚಿಲ್ಲರೆ ನಾಣ್ಯಗಳನ್ನು ನೋಡಿದ ಪತ್ನಿ ಹಣ ಎಣಿಸಲು ನಿರಾಕರಿಸಿ ಬ್ಯಾಗ್‌ ತೆಗೆದುಕೊಂಡು ಮರಳಿದ್ದಾಳೆ.   
 
ಪ್ರುಥ್ವಿ ಪ್ರಜಾಪತಿ ಯಾಕೆ ಚಿಲ್ಲರೆ ನಾಣ್ಯಗಳನ್ನು ತಂದಿದ್ದಾನೆ ಎನ್ನುವುದು ನನಗೆ ಅರ್ಥವಾಗಲಿಲ್ಲ. ಆತನಿಗೆ ಕೇಳಿದಾಗ ನನ್ನ ಬಳಿ ಚಿಲ್ಲರೆ ನಾಣ್ಯಗಳು ಮಾತ್ರ ಇದ್ದವು ಎಂದು ಹೇಳಿರುವುದಾಗಿ ಪ್ರಜಾಪತಿ ಪರ ವಕೀಲ ಪ್ರಜ್ಞಾ ವ್ಯಾಸ್ ತಿಳಿಸಿದ್ದಾರೆ.  
 
ಪ್ರಜಾಪ್ರತಿಗೆ ಮಾಸಿಕವಾಗಿ 1500 ರೂಪಾಯಿಗಳನ್ನು ಪತ್ನಿಗೆ ಜೀವನಾಂಶವಾಗಿ ನೀಡುವಂತೆ ಕೋರ್ಟ್ ಆದೇಶಿಸಿತ್ತು. ಹಣ ನೀಡಲು ಆತ ಕೋರ್ಟ್‌ಗೆ ಹೋಗಬೇಕಾಗಿರಲಿಲ್ಲ. ಆದರೆ, ಪ್ರಜಾಪತಿ ಕಳೆದ 2014ರಿಂದ ಪತ್ನಿಗೆ ಮಾಸಿಕ ಜೀವನಾಂಶ ಪಾವತಿಸದಿದ್ದರಿಂದ ನ್ಯಾಯಮೂರ್ತಿಗಳ ಎದುರಲ್ಲಿ ಹಿಂಬಾಕಿ ಸೇರಿದಂತೆ ಒಟ್ಟು ಹಣವನ್ನು ಪಾವತಿಸುವಂತೆ ಕೋರ್ಟ್ ಆದೇಶಿಸಿತ್ತು. ಇದರಿಂದ ಜೀವನಾಂಶ ನೀಡಬೇಕಾಗಿರುವ ಮೊತ್ತ 10 ಸಾವಿರ ರೂಪಾಯಿಗಳಿಗೆ ತಲುಪಿತ್ತು. ಆದರೆ, ಪತ್ನಿ ನೀಡಿದ ದೂರಿನಿಂದ ಆಕ್ರೋಶಗೊಂಡ ಪತಿ 10 ಸಾವಿರ ರೂಪಾಯಿಗಳ ಚಿಲ್ಲರೆ ನಾಣ್ಯಗಳನ್ನು ತಂದಿದ್ದನು ಎನ್ನಲಾಗಿದೆ.
 
ಪ್ರಜಾಪತಿ ಪರ ವೀಕಲ ವ್ಯಾಸ್ ಮಾತನಾಡಿ, ಕಳೆದ 2011 ರಿಂದ ಪತಿ ಮತ್ತು ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ನಂತರ ಪತ್ನಿ ರಾಮಿಲಾಬೆನ್ ಕೌಟಂಬಿಕ ನ್ಯಾಯಾಲಯದಲ್ಲಿ ಪತಿಯಿಂದ ಜೀವನಾಂಶ ಕೊಡಿಸುವಂತೆ ದೂರು ದಾಖಲಿಸಿದ್ದಳು. ಪತಿ ಶೋರೂಮ್‌ ಒಂದರ ಮಾಲೀಕನಾಗಿದ್ದಾನೆ ಎಂದು ಪತ್ನಿ ದೂರಿದ್ದರೆ, ನಾನು ಕೇವಲ ಶೋರೂಮ್‌ನಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಪತಿ ವಾದಿಸಿದ್ದನು. ಕೊನೆಗೆ ಪ್ರಜಾಪತಿ, ತನ್ನ ಪತ್ನಿಗೆ ಮಾಸಿಕವಾಗಿ 1500 ರೂಪಾಯಿಗಳನ್ನು ಜೀವನಾಂಶವಾಗಿ ಪಾವತಿಸುವಂತೆ ಕೋರ್ಟ್ ಆದೇಶ ನೀಡಿತ್ತು.   

Share this Story:

Follow Webdunia kannada