Select Your Language

Notifications

webdunia
webdunia
webdunia
webdunia

ಮಗಳು ಮತ್ತು 6 ಜನ ಮೊಮ್ಮಕ್ಕಳನ್ನು ಕೊಂದ, ತಾನು ಸತ್ತ!

ಮಗಳು ಮತ್ತು 6 ಜನ ಮೊಮ್ಮಕ್ಕಳನ್ನು ಕೊಂದ, ತಾನು ಸತ್ತ!
ಫ್ಲೋರಿಡಾ , ಶುಕ್ರವಾರ, 19 ಸೆಪ್ಟಂಬರ್ 2014 (13:56 IST)
51 ವರ್ಷದ ವ್ಯಕ್ತಿಯೊಬ್ಬ ಮಗಳು ಮತ್ತು 6 ಜನ ಮೊಮ್ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಫ್ಲೋರಿಡಾದಲ್ಲಿ ವರದಿಯಾಗಿದೆ.

ಶಂಕಿತನನ್ನು ಡಾನ್ ಸ್ಪಿರಿಟ್ ಎಂದು ಗುರುತಿಸಲಾಗಿದ್ದು, ತುರ್ತು ಲೈನ್ 911 ಕರೆ ಮಾಡಿದ ಆತ, ಶಾಂತಿಪಾಲನಾ ಅಧಿಕಾರಿ ರಾಬರ್ಟ್ ಷುಲ್ಟ್ಜ್  ಸ್ಥಳಕ್ಕಾಗಮಿಸುವಷ್ಟರಲ್ಲಿ  ತನ್ನನ್ನು ತಾನು ಕೊಂದುಕೊಂಡಿದ್ದ.
 
ಮನೆಯಲ್ಲಿದ್ದ ಎಲ್ಲರನ್ನು ಆತ ಕೊಂದಿದ್ದಾನೆ. ಕೊನೆಯ ಮಗು 3 ತಿಂಗಳದ್ದಾಗಿದ್ದರೆ, ಹಿರಿಯ ಮಗು 11 ವರ್ಷದ್ದಾಗಿತ್ತು ಎಂದು  ಷುಲ್ಟ್ಜ್  ತಿಳಿಸಿದ್ದಾರೆ. 
 
ಗೇಯ್ನ್ಸ್ವಿಲ್‌ನಿಂದ  ಸರಿಸುಮಾರು 35 ಮೈಲುಗಳಷ್ಟು (56 ಕಿಮೀ) ಪಶ್ಚಿಮಕ್ಕಿರುವ ಬೆಲ್ ನಗರದಲ್ಲಿ ಘಟನೆ ನಡೆದಿದೆ. 
 
ಮೃತ ಮಹಿಳೆಯನ್ನು 28 ವರ್ಷದ ತರಾಹ ಸ್ಪಿರಿಟ್ ಎಂದು ಗುರುತಿಸಲಾಗಿದ್ದು ಮೃತರೆಲ್ಲರೂ ಆಕೆಯ ಮಕ್ಕಳಾಗಿದ್ದರು.  ಅವರಲ್ಲಿ ಮೂರು ಜನ ಗಂಡು ಮಕ್ಕಳಾಗಿದ್ದರೆ, ಮೂರು ಜನ ಹೆಣ್ಣು ಮಕ್ಕಳಾಗಿದ್ದಾರೆ.
 
ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಈ ಭೀಕರ ಕೃತ್ಯದ ಹಿಂದಿನ ಕಾರಣವೇನೆಂದು ತಿಳಿದು ಬಂದಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ. 
 
ನ್ಯೂಜೆರ್ಸಿಯ ನಿವಾಸಿಯಾಗಿರುವ ಡಾನ್ ಸ್ಪಿರಿಟ್ ವ್ಯಾಪಕ ಕ್ರಿಮಿನಲ್ ಇತಿಹಾಸವನ್ನು ಹೊಂದಿದ್ದಾನೆ. ಸಾರ್ವಜನಿಕ ದಾಖಲೆಗಳ ಪ್ರಕಾರ ಅಕ್ರಮ ಶಸ್ತ್ರಾಸ್ತ್ರಗಳ ಒಡೆತನ, ಮಾದಕದ್ರವ್ಯ ಸಾಗಾಟ ಇತ್ಯಾದಿ ಪ್ರಕರಣಗಳು ಆತನ ಮೇಲೆ ದಾಖಲಾಗಿವೆ. 
 
2001ರಲ್ಲಿ ಆತ ತನ್ನ 8 ವರ್ಷದ ಮಗನನ್ನು ಕೊಂದಿದ್ದ, ಆದರೆ ಆಕಸ್ಮಿಕ ಅಪಘಾತದಲ್ಲಿ ಆತ ಸಾವನ್ನಪ್ಪಿದ ಎಂದು ಪ್ರಕರಣವನ್ನು ತಿರುಚಿ ಹಾಕಲಾಗಿತ್ತು ಎಂದು ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ. 

Share this Story:

Follow Webdunia kannada