ಗೋಮಾಂಸ ಸಾಗಿಸುತ್ತಿದ್ದ ಆರೋಪ: ರೈಲಲ್ಲೇ ನಡಿತು ಮಾರಾಮಾರಿ: ಓರ್ವ ಸಾವು

Webdunia
ಶುಕ್ರವಾರ, 23 ಜೂನ್ 2017 (15:40 IST)
ನವದೆಹಲಿ:ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದಾರೆಂದು ಆರೋಪಿಸಿ ಮೂರು ಮಂದಿಯ ಮೇಲೆ ಸಹ ಪ್ರಯಾಣಿಕರು ಹಲ್ಲೆ ನಡೆಸಿ, ರೈಲಿನಲ್ಲೆ ಆರಂಭವಾದ ಮಾರಾಮಾರಿ ಓರ್ವನ ಸಾವಿನಲ್ಲಿ ಅಂತ್ಯವಾದ ಘಟನೆ ಘಾಜಿಯಾಬಾದ್‌-ದೆಹಲಿ-ಮಥುರಾ ರೈಲಿನಲ್ಲಿ ನಡೆದಿದೆ.
 
ಹರಿಯಾಣದ ವಲ್ಲಬ್‌ಘರ್‌ದ ನಿವಾಸಿ ಜುನೈದ್‌ ತನ್ನ ಇಬ್ಬರು ಸೋದರ ಸಂಬಂಧಿಗಳಾದ ಹಶೀಮ್‌ ಮತ್ತು ಶಕೀರ್‌ ಜತೆಗೆ ದೆಹಲಿಯ ಸದರ್‌ ಬಜಾರ್‌ನಲ್ಲಿ ಹಬ್ಬದ ಖರೀದಿ ಮುಗಿಸಿ ರೈಲಿನಲ್ಲಿ ಊರಿಗೆ ಮರಳುತ್ತಿದ್ದರು. ಓಖ್ಲಾ ನಿಲ್ದಾಣ ಸಮೀಪಿಸುತ್ತಿದ್ದ ವೇಳೆ ಆಸನಕ್ಕಾಗಿ ಈ ಮೂವರು ಹಾಗೂ ಮತ್ತೊಂದು ಗುಂಪಿನ ನಡುವೆ ಜಗಳವಾಗಿದೆ. ಮೂರು ಮಂದಿ ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದಾರೆಂದು ಗುಂಪಿನಲ್ಲಿದ್ದವರು ಆರೋಪಿಸಿದ್ದಾರೆ. ಜಗಳ ಹೆಚ್ಚಾಗಿ ಗುಂಪಿನಲ್ಲಿದ್ದವರು ಮೂವರ ಮೇಲೂ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಜುನೈದ್‌ ಎಂಬುವವರು ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
 
ಈ ಬಗ್ಗೆ ಹೇಳಿಕೆ ನೀಡಿರುವ ರೈಲ್ವೆ ಪೊಲೀಸರು, ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದಾರೆಂದು ನಡೆದ ಜಗಳವಲ್ಲ, ಕೇವಲ ಆಸನಕ್ಕಾಗಿ ನಡೆದ ಜಗಳ ಎಂದಿದ್ದಾರೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಿನ್ನವಿಲ್ಲ, ವಜ್ರವಿಲ್ಲ: ಕೇರಳದ ವಧುವೊಬ್ಬಳು ಚಿನ್ನಾಭರಣವಿಲ್ಲದ ಲುಕ್‌ ದೇಶದೆಲ್ಲೆಡೆ ಸದ್ದು

ಮಾಸ್ಕ್ ಹಾಕಿಕೊಂಡು ಬಿಎಂಟಿಸಿ ಏರಿದ ಸಚಿವ ಬೈರತಿ ಸುರೇಶ್: ಚಿಲ್ರೆ ಇಲ್ಲ ಎಂದರೆ ಸಚಿವರನ್ನೇ ಬಸ್ ನಿಂದ ಕೆಳಿಗಿಳಿಸೋದಾ Video

Video: ಹೀಗಾದ್ರೆ ಡೆಲಿವರಿ ಬಾಯ್ಸ್‌ಗೆ ಡೋರ್ ಓಪನ್ ಮಾಡುವುದು ಹೇಗೆ, ತನಗಾದ ಕೆಟ್ಟ ಅನುಭವ ಬಿಚ್ಚಿಟ್ಟ ಯುವತಿ

Karnataka Weather: ನಿರಂತರ ಮಳೆಯಾಗಿರುವ ಕರಾವಳಿ ಭಾಗದಲ್ಲಿ ಇಂದು ಹೇಗಿರಲಿದೆ ಗೊತ್ತಾ ಹವಾಮಾನ

ಎಸ್‌ ಜಾನಕಿ ಪ್ರತಿ ಮಲಯಾಳಿ ಮನೆಯ ಸದಸ್ಯರಾಗಿದ್ದಾರೆ: ಕೇರಳ ಸಿಎಂ ವಿಡಿ ಸತೀಶನ್‌

ಮುಂದಿನ ಸುದ್ದಿ
Show comments