Select Your Language

Notifications

webdunia
webdunia
webdunia
webdunia

ಟೆರೇಸ್ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನ: ಸತ್ತಿದ್ದು ಕೆಳಗೆ ಮಲಗಿದ್ದ ಅಜ್ಜಿ

ಟೆರೇಸ್ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನ: ಸತ್ತಿದ್ದು ಕೆಳಗೆ ಮಲಗಿದ್ದ ಅಜ್ಜಿ
ಚೆನ್ನೈ: , ಮಂಗಳವಾರ, 30 ಆಗಸ್ಟ್ 2016 (18:35 IST)
37 ವರ್ಷದ ಮಧ್ಯವಯಸ್ಕರೊಬ್ಬರಿಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿತೆಂದು ಕಾಣುತ್ತದೆ. ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಮೂರು ಮಹಡಿಗಳ ಕಟ್ಟಡದ ಟೆರೇಸ್‌ ಮೇಲೆ ತೆರಳಿ ಮೇಲಿನಿಂದ ಕೆಳಕ್ಕೆ ಜಿಗಿದ. ಆದರೆ ಮೇಲಿನಿಂದ ಜಿಗಿದರೂ ಕೂಡ ಅವನು ಅದೃಷ್ಟವಶಾತ್ ಬದುಕುಳಿದ. ಆದರೆ ನೆಲದ ಮೇಲೆ ಮಲಗಿದ್ದ 75 ವರ್ಷದ ಅಜ್ಜಿ ಜೀವ ಹೋಯಿತು.

ಶಾರದಾ ಎಂಬ ಹೆಸರಿನ ಅಜ್ಜಿ ತನ್ನ ಮಂಚವನ್ನು ಮನೆಯಿಂದ ಹೊರಗೆಳೆದು ತಣ್ಣನೆಯ ಗಾಳಿಯ ಸುಖ ಅನುಭವಿಸಲು ಹೊರಗೆ ಮಲಗಿದ ಕೂಡಲೇ ನಿದ್ರಾದೇವಿಗೆ ಶರಣಾಗಿದ್ದರು. ಸೆಲ್ವಮುರುಗನ್ ಎಂಬ ಆಟೋ ಚಾಲಕನ ಮೇಲಿನಿಂದ ಜಿಗಿದಾಗ ಕೆಳಗೆ ಮಹಿಳೆ ಮಲಗಿದ್ದನ್ನು ಗಮನಿಸಿರಲಿಲ್ಲ. ಅಜ್ಜಿಯ ಮೈಮೇಲೆ ಬಿದ್ದಿದ್ದರಿಂದ ಅಜ್ಜಿ ಚಿರನಿದ್ರೆ ಅಪ್ಪಿದರು. ತಲೆಗೆ ಗಾಯಗಳಾದ ಚಾಲಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. 
 
 ಸೆಲ್ವಮುರುಗನ್ ಪಾನಮತ್ತನಾಗಿ ಪತ್ನಿ ಧನಲಕ್ಷ್ಮಿ ಮತ್ತು ಸೋದರನ ಜತೆ ಜಗಳವಾಡಿಕೊಂಡು ಕಟ್ಟಡದ ಟೆರೇಸ್ ಮೇಲೆ ಹೋಗಿ ಜಿಗಿಯುವುದಾಗಿ ಬೆದರಿಕೆ ಹಾಕಿದ್ದ. ಪದೇ ಪದೇ ಅದೇ ರೀತಿ ಮಾಡಿದ್ದರಿಂದ ಪತ್ನಿ ಸಹ ಅವನ ಬೆದರಿಕೆಗೆ ನಿರ್ಲಕ್ಷ್ಯ ವಹಿಸಿದ್ದಳು. ಸೆಲ್ವಮುರುಗನ್ ಅಜ್ಜಿಯ ಮೇಲೆ ಬಿದ್ದ ಕೂಡಲೇ ಅವಳ ಕೂಗಿಗೆ ಜನರಿಗೆ ಎಚ್ಚರವಾಯಿತು. ಸೆಲ್ವಮುರುಗನ್ ಮತ್ತು ಶಾರದಾ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಸೆಲ್ವಂ ತಲೆಬುರುಡೆಗೆ ಮತ್ತು ಕಾಲಿಗೆ ಗಾಯಗಳಾಗಿದ್ದು, ಅಜ್ಜಿ ಪರಲೋಕ ವಾಸಿಯಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಿರ್ಗಿಸ್ತಾನದ ಚೀನಾ ಎಂಬಸಿಯಲ್ಲಿ ಕಾರ್ ಬಾಂಬ್ ಸ್ಫೋಟ: ಚಾಲಕ ಹತ್ಯೆ