Select Your Language

Notifications

webdunia
webdunia
webdunia
webdunia

ಮಹಿಳಾ ಸಹದ್ಯೋಗಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ನಾಲ್ಕು ವರ್ಷ ಶಿಕ್ಷೆ

ಮಹಿಳಾ ಸಹದ್ಯೋಗಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ನಾಲ್ಕು ವರ್ಷ ಶಿಕ್ಷೆ
ನವದೆಹಲಿ , ಬುಧವಾರ, 29 ಜುಲೈ 2015 (17:36 IST)
ಮನೆಯಲ್ಲಿ ಆಯೋಜಿಸಿಲಾಗಿದ್ದ ಪಾರ್ಟಿಯಲ್ಲಿ ಸಹದ್ಯೋಗಿ ಮಹಿಳೆ ಮದ್ಯ ಸೇವಿಸಿದ ಮತ್ತಿನಲ್ಲಿರುವಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ದೆಹಲಿ ಕೋರ್ಟ್ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ
 
ಹೆಚ್ಚುವರಿ ಸೆಷೆನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ವಿರೇಂದರ್ ಭಟ್ ತೀರ್ಪು ನೀಡುವ ಮುನ್ನ ಹೇಳಿಕೆ ನೀಡಿ, ದೆಹಲಿ ನಿವಾಸಿಯಾದ ಆರೋಪಿ ಸಂಜೀವ್ ಕುಮಾರ್ ಮನೆಗೆ ಆಹ್ವಾನಿಸಿದ್ದ ಮಹಿಳಾ ಅತಿಥಿಯೊಬ್ಬಳು ಕುಡಿದು ಮತ್ತೇರಿ ಮಲಗಿದ್ದಾಗ ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ಹೇಯ ಕೃತ್ಯ. ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. 
 
ಆರೋಪಿ ತಾನಾಗಿಯೇ ಆಹ್ವಾನಿಸಿದ್ದ ಮಹಿಳಾ ಸಹದ್ಯೋಗಿ ಮದ್ಯ ಸೇವಿಸಿ ಮಲಗಿದ್ದ ಸಂದರ್ಭದಲ್ಲಿ ರೇಪ್ ಮಾಡಿರುವುದು ಹೀನಾಯ ಕೃತ್ಯ ಆರೋಪಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸುವುದರೊಂದಿಗೆ 25 ಸಾವಿರ ರೂಪಾಯಿಗಳ ದಂಡವನ್ನು ಮಹಿಳಾ ಸಹದ್ಯೋಗಿಗೆ ನೀಡುವಂತೆ ಕೋರ್ಟ್ ಆದೇಶಿಸಿದೆ. 
 
ಕಂಪೆನಿಯಲ್ಲಿ ಬಡ್ತಿ ಪಡೆದಿದ್ದಕ್ಕಾಗಿ ಪಾರ್ಟಿ ಆಯೋಜಿಸಿದ್ದ ಆರೋಪಿ ಕುಮಾರ್, ತನ್ನದೇ ಅತಿಥಿಯ ವಿರುದ್ಧ ಅಸಭ್ಯವಾಗಿ ವರ್ತಿಸಿರುವುದು ಹೇಯ ಕೃತ್ಯ ಎಂದು ಕೋರ್ಟ್ ಹೇಳಿದೆ.

Share this Story:

Follow Webdunia kannada