Select Your Language

Notifications

webdunia
webdunia
webdunia
webdunia

ಮೊಬೈಲ್ ಮೂಲಕ ಪತ್ನಿಗೆ ವಿಚ್ಛೇದನ ನೀಡಿದ ಮಹಾಶಯ

ಮೊಬೈಲ್ ಮೂಲಕ ಪತ್ನಿಗೆ ವಿಚ್ಛೇದನ ನೀಡಿದ ಮಹಾಶಯ
ಹರಿದ್ವಾರ , ಬುಧವಾರ, 3 ಫೆಬ್ರವರಿ 2016 (15:42 IST)
ಮೊಬೈಲ್ ಮೂಲಕ ಪ್ರೀತಿ ಹುಟ್ಟಿ ಮದುವೆಯಲ್ಲಿ ಅಂತ್ಯ ಕಾಣುವುದು ಕೆಲ ವರ್ಷಗಳಿಂದ ಸಾಮಾನ್ಯವಾಗಿದೆ. ಆದರೆ ಮೊಬೈಲ್ ಮೂಲಕ ವಿಚ್ಛೇದನದ ಪ್ರಕರಣಗಳು ಸಹ ಇತ್ತೀಚಿಗೆ ವರದಿಯಾಗುತ್ತಿವೆ. ಅದಕ್ಕೆ ಮತ್ತೊಂದು ದೃಷ್ಟಾಂತವೆಂಬಂತೆ ಹರಿದ್ವಾರದ ನಿವಾಸಿಯೊಬ್ಬ ಸಹ ತನ್ನ ಪತ್ನಿಗೆ ಮೊಬೈಲ್ ಸಂದೇಶದ ಮೂಲಕ ವಿಚ್ಛೇದನವನ್ನು ಕಳುಹಿಸಿದ್ದಾನೆ. 

 
ಜ್ವಾಲಾಪುರದ ನಿವಾಸಿಯಾಗಿರುವ ಯುವಕ ಮತ್ತು ಆತನ ಪತ್ನಿಯ ನವದಾಂಪತ್ಯ ಆರಂಭದಿಂದಲೂ ಕಹಿಯಾಗಿಯೇ ಇತ್ತು. ಕಳೆದ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ದಂಪತಿಗಳಲ್ಲಿ ಆಗಿನಿಂದಲೂ ಸದಾ ಜಗಳವಾಗುತ್ತಿತ್ತು ಎನ್ನಲಾಗಿದೆ. 
 
ಅವರ ಜಗಳ ತಾರಕಕ್ಕೇರಿ ಪೊಲೀಸ್ ಠಾಣೆ ಮೆಟ್ಟಿಲೇರಿತು. ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಗಿದ ಬಳಿಕ ಪತ್ನಿ ತವರಿನ ಕಡೆ ಪ್ರಯಾಣ ಬೆಳೆಸಿದ್ದಾಳೆ. ದಾರಿ ಮಧ್ಯೆ ಆಕೆಗೆ ಗಂಡನಿಂದ ತಲಾಖ್ ಸಂದೇಶ ಬಂದಿದೆ. 
 

Share this Story:

Follow Webdunia kannada