Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಪುತ್ರಿಯ ಅತ್ಯಾಚಾರಿಗೆ ಜೀವಾವಧಿ

ಅಪ್ರಾಪ್ತ ಪುತ್ರಿಯ ಅತ್ಯಾಚಾರಿಗೆ ಜೀವಾವಧಿ
ಇಂದೋರ್ , ಮಂಗಳವಾರ, 1 ಮಾರ್ಚ್ 2016 (14:21 IST)
ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರವೆಸಗಿದ ಕೀಚಕ ತಂದೆಗೆ ಇಂದೋರ್‌ನ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ನೀಡಿದೆ. 
 
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ  ರಾಜೇಶ್ ಕುಮಾರ್ ಗುಪ್ತಾ ಅಪರಾಧಿ ಸುನೀಲ್ ಜೈನ್‌ಗೆ  5,000 ರೂಪಾಯಿ ದಂಡವನ್ನು ಸಹ ವಿಧಿಸಿದ್ದಾರೆ. 
 
ಆರೋಪಿ ಜೈನ್ ವೃತ್ತಿಯಲ್ಲಿ ಮ್ಯಾರೇಜ್ ಬ್ಯೂರೋ ನಿರ್ದೇಶಕರಾಗಿದ್ದು 2014ರಲ್ಲಿ ತಮ್ಮ ಮಗಳ ಮೇಲೆ ಅತ್ಯಾಚಾರವೆಸಗಿದ್ದ. 
 
ಐಪಿಸಿಯ ಸಂಬಂಧಿಸಿದ ವಿಭಾಗಗಳು ಮತ್ತು ಪೋಸ್ಕೋ ಕಾಯಿದೆಯಡಿಯಲ್ಲಿ ಆರೋಪಿಯ ಮೇಲೆ ಪ್ರಕರಣ ದಾಖಲಾಗಿತ್ತು. ಎಂಟು ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆ ಅವರಿಗೆ ಶಿಕ್ಷೆಯನ್ನು ವಿಧಿಸಲಾಯಿತು ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್
 ಸಂತೋಷ್ ಚೌರಾಸಿಯಾ ಹೇಳಿದ್ದಾರೆ. 
 
ಮಗನನ್ನು ಯಾವುದೋ ಕೆಲಸದ ನೆಪದಲ್ಲಿ ಹೊರಗೆ ಕಳುಹಿಸಿ ಮನೆಯಲ್ಲಿ ಒಬ್ಬಳೇ ಇದ್ದ ಮಗಳ ಮೇಲೆ ಜೈನ್ ಅತ್ಯಾಚಾರವೆಸಗಿದ್ದ. ಡಿಸೆಂಬರ್ 9, 2014ರಲ್ಲಿ ಈ ಘಟನೆ ನಡೆದಿತ್ತು. 

Share this Story:

Follow Webdunia kannada