Select Your Language

Notifications

webdunia
webdunia
webdunia
webdunia

ಗಗನ ಸಖಿ ಜತೆ ಸೆಲ್ಫಿ: ವ್ಯಕ್ತಿ ಬಂಧನ

ಗಗನ ಸಖಿ ಜತೆ ಸೆಲ್ಫಿ: ವ್ಯಕ್ತಿ ಬಂಧನ
ಮುಂಬೈ , ಮಂಗಳವಾರ, 28 ಜೂನ್ 2016 (16:49 IST)
ಗಗನಸಖಿ ಜತೆ ಒತ್ತಾಯಪೂರ್ವಕವಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಆರೋಪದ ಮೇಲೆ ಮುಂಬೈ ಪೊಲೀಸರು ಸೋಮವಾರ ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯನ್ನು 29 ವರ್ಷದ ಮೊಹಮ್ಮದ್ ಅಬೂಬಕರ್ ಎಂದು ಗುರುತಿಸಲಾಗಿದ್ದು ಆತ ಶೌಚಾಲಯದಲ್ಲಿ ಸಿಗರೇಟ್ ಸೇವನೆ ಮಾಡುವುದರ ಮೂಲಕ ವೈಮಾನಿಕ ನಿಯಮವನ್ನು ಸಹ ಉಲ್ಲಂಘಿಸಿದ್ದ. 

ವಿಮಾನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದಂತೆ, ತನ್ನ ಸೀಟಿನಲ್ಲಿ ಕುಳಿತಿದ್ದ ಅಬೂಬಕರ್ ಗಗನಸಖಿ ಕೈ ಹಿಡಿದೆಳೆದು 'ಚಲೋ ನಾ ಯಾರ್ ಏಕ್ ಸೆಲ್ಫಿ ಲೇತೆ ಹೈ ', ಎಂದಿದ್ದಾನೆ. ಆಕೆ ಎಷ್ಟು ಆಕ್ಷೇಪ ವ್ಯಕ್ತ ಪಡಿಸಿದರೂ ಅವನು ತನ್ನ ದುರ್ವರ್ತನೆಯನ್ನು ಮುಂದುವರೆಸಿದ್ದಾನೆ. ಆತ ಹಲವು ಬಾರಿ ತನ್ನ ಜತೆ ಕೆಟ್ಟದಾಗಿ ನಡೆದುಕೊಂಡ, ಅಷ್ಟೇ ಒತ್ತಾಯಪೂರ್ವಕವಾಗಿ ಹಿಡಿದೆಳೆದು ಸೆಲ್ಫಿಯನ್ನು ಕ್ಲಿಕ್ಕಿಸಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ. 
 
ಆಕೆ ಧ್ವನಿ ಏರಿಸುತ್ತಿದ್ದಂತೆ ಕ್ಯಾಬಿನ್ ಸಿಬ್ಬಂದಿ ಸಹಾಯಕ್ಕೆ ಬಂದಿದ್ದಾರೆ. ಅವರನ್ನು ನೋಡಿ ಶೌಚಾಲಯದೊಳಗೆ ಹೋದ ಅಬೂಬಕರ್ ಅಲ್ಲಿ ಸ್ಮೋಕ್ ಮಾಡಿಕೊಂಡು ಹೊರಬಂದಿದ್ದಾನೆ. ಆತನ ಬಳಿ ಇದ್ದ ಸಿಗರೇಟ್ ಪಾಕೇಟ್ ಮತ್ತು ಲೈಟರ್‌ನ್ನು ವಶಕ್ಕೆ ನೀಡುವಂತೆ ಹೇಳಿದ್ದಾರೆ. 
 
ಆತ ಭದ್ರತಾ ಅಧಿಕಾರಿಗಳ ಕಣ್ಣು ತಪ್ಪಿಸಿ ಸಿಗರೇಟ್ ಮತ್ತು ಲೈಟರ್ ತರುವಲ್ಲಿ ಹೇಗೆ ಯಶಸ್ವಿಯಾದ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ವಿಮಾನದಲ್ಲಿ ಸ್ಮೋಕ್ ಮಾಡುವ ಮೂಲಕ ಆತ ಅನೇಕ ಜೀವಗಳನ್ನು ಅಪಾಯಕ್ಕೆ ಸಿಲುಕಿಸಿದ್ದಾನೆ ಎಂದು ಸಬ್ ಇನ್ಸಪೆಕ್ಟರ್ ವಿ.ಎಸ್.ಪವಾರ್ ತಿಳಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯವಾಡಾದಲ್ಲಿ ವೋಲ್ವೋ ಕಾರಿನ ಬೃಹತ್ ಶೋರೂಮ್ ಆರಂಭ