Select Your Language

Notifications

webdunia
webdunia
webdunia
webdunia

ಗರ್ಲ್‌ಫ್ರೆಂಡ್ ವಿವಾಹವಾಗಲು ನಿರಾಕರಿಸಿದ್ದಕ್ಕಾಗಿ ಶಿಶ್ನವನ್ನೇ ಕತ್ತರಿಸಿಕೊಂಡ ಭೂಪ

ಗರ್ಲ್‌ಫ್ರೆಂಡ್ ವಿವಾಹವಾಗಲು ನಿರಾಕರಿಸಿದ್ದಕ್ಕಾಗಿ ಶಿಶ್ನವನ್ನೇ ಕತ್ತರಿಸಿಕೊಂಡ ಭೂಪ
ಪಠಾನ್‌ಕೋಟ್ , ಸೋಮವಾರ, 22 ಆಗಸ್ಟ್ 2016 (14:46 IST)
ಪ್ರೇಮಪಾಶದಲ್ಲಿ ಸಿಲುಕಿ ದೂರವಾದ ಯುವಕ ಯುವತಿಯರು ಯಾವ ರೀತಿ ವರ್ತನೆ ತೋರುತ್ತಾರೆ ಎನ್ನುವ ಹಲವಾರು ಪ್ರಕರಣಗಳನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಮಹಾಶಯ ತಾನು ಪ್ರೀತಿಸಿದ ಯುವತಿ ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ತನ್ನ ಶಿಶ್ನವನ್ನೇ ಕತ್ತರಿಸಿಹಾಕಿದ ಹೇಯ ಘಟನೆ ವರದಿಯಾಗಿದೆ. 
 
ಪಂಜಾಬ್‌ನ ಪಠಾನ್‌ಕೋಟ್ ಜಿಲ್ಲೆಯ ಸುಂದರನಗರ್ ಪಟ್ಟಣದ ನಿವಾಸಿಯಾದ ವ್ಯಕ್ತಿಯೊಬ್ಬ ವೃತ್ತಿಯಲ್ಲಿ ಪೇಂಟರ್‌ನಾಗಿದ್ದು ಯುವತಿಯನ್ನು ಪ್ರೀತಿಸಿದ್ದ. ವಿವಾಹವಾಗುವ ಬಗ್ಗೆ ಯುವತಿಯ ಮುಂದೆ ಕೋರಿಕೆ ಸಲ್ಲಿಸಿದ್ದ. ಆದರೆ, ಯುವತಿ ನನಗಾಗಿ ಸ್ವಂತ ಮನೆಯನ್ನು ಖರೀದಿಸಿದಲ್ಲಿ ಮಾತ್ರ ವಿವಾಹವಾಗುವುದಾಗಿ ಷರತ್ತನ್ನು ವಿಧಿಸಿದ್ದಳು ಎನ್ನಲಾಗಿದೆ. 
 
ಪೋಷಕರ ಅನುಮತಿ ಪಡೆದ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಗಾಗಿ ಸುಂದರವಾದ ಮನೆಯನ್ನು ಬಾಡಿಗೆಗೆ ಹಿಡಿದಿದ್ದ. ಅದೇ ಮನೆಯಲ್ಲಿ ತನ್ನ ಯುವತಿಯೊಂದಿಗೆ ವಾಸಿಸುವ ಕನಸು ಕಾಣುತ್ತಿದ್ದ. ಆದರೆ ಬಾಡಿಗೆ ಮನೆಯಲ್ಲಿ ವಾಸಿಸಲು ನಿರಾಕರಿಸಿದ ಯುವತಿ ಆತನೊಂದಿಗೆ ವಿವಾಹವಾಗಲು ನಿರಾಕರಿಸಿದ್ದಾಳೆ. 
 
ಪ್ರೇಮಿ ಯುವತಿ ತನ್ನೊಂದಿಗೆ ವಿವಾಹವಾಗಲು ನಿರಾಕರಿಸಿದ್ದರಿಂದ ಹತಾಶೆ, ಆಕ್ರೋಶದಿಂದಾಗಿ ಯುವಕ ತನ್ನ ಶಿಶ್ನವನ್ನೇ ಕತ್ತರಿಸಿಕೊಂಡಿದ್ದಾನೆ.
 
ಕಳೆದ ನಾಲ್ಕು ವರ್ಷಗಳ ಹಿಂದೆ ಯುವಕನಿಗೆ ಮೊದಲೇ ಒಂದು ಮದುವೆಯಾಗಿತ್ತು. ಆದರೆ, ವಿವಾಹವಾದ ಕೇವಲ ಮೂರು ತಿಂಗಳಲ್ಲಿಯೇ ದಂಪತಿಗಳು ವಿಚ್ಚೇದನ ಪಡೆದಿದ್ದರು. ಇದೀಗ ಯುವಕ ಪ್ರೀತಿ ಮಾಡಿದ ಯುವತಿಯೊಂದಿಗೆ ಮತ್ತೊಂದು ಮದುವೆಯಾಗಲು ಸಿದ್ದನಾಗಿದ್ದ. 
 
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಆಕೆಯ ಪೋಷಕರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಆತನ ಪರಿಸ್ಥಿತಿ ಗಂಬೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಆರ್‌ಬಿಐಗೆ ಉರ್ಜಿತ್ ಪಟೇಲ್ ನೇಮಕ: ಚೇತರಿಕೆ ಕಂಡ ಶೇರುಸೂಚ್ಯಂಕ