Webdunia - Bharat's app for daily news and videos

Install App

ಬೈಕ್‌ನಲ್ಲಿ ಮಗಳ ಶವ ಸಾಗಿಸಿದ ತಂದೆ

Webdunia
ಸೋಮವಾರ, 20 ಫೆಬ್ರವರಿ 2017 (12:20 IST)
ಬಡ ಪತಿಯೊಬ್ಬ ತನ್ನ ಮೃತ ಪತ್ನಿಯ ಶವವನ್ನು ಸಾಗಿಸಲು ಹಣವಿಲ್ಲದೆ, ಹೆಗಲ ಮೇಲೆ ಹೊತ್ತು ಸಾಗಿದ ಹೃದಯವಿದ್ರಾವಕ ಕಥೆಯನ್ನು ಓದಿರುತ್ತೀರ. ಮತ್ತೀಗ ಅಂತಹದೇ ಘಟನೆಯೊಂದು ನಮ್ಮದೇ ರಾಜ್ಯದಲ್ಲಿ ನಡೆದಿದೆ.

ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದ ತಂದೆಯೋರ್ವ ಅಂಬುಲೆನ್ಸ್ ಸೇವೆ ದೊರೆಯದಿದ್ದುದರಿಂದ ತನ್ನ ಮಗಳ ಶವವನ್ನು ಬೈಕ್‌ನಲ್ಲಿ ಸಾಗಿಸಿದ್ದಾನೆ.
 
ಘಟನೆ ವಿವರ: ಮಧುಗಿರಿಯ ವೀರಾಪುರದ ತಿಮ್ಮಪ್ಪ ಎಂಬುವವರ ಮಗಳು ರತ್ನವ್ವ(20) ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಆಕೆಯನ್ನು ಕೊಡಿಗೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಆಕೆ ಸಾವನ್ನಪ್ಪಿದ್ದಾಳೆ.
 
ಮಗಳ ಶವವನ್ನು ತನ್ನ ಗ್ರಾಮ ವೀರಾಪುರಕ್ಕೆ ಸಾಗಿಸಲು ಹೋಬಳಿ ಕೇಂದ್ರದ ಈ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಕೂಡ ಇರಲಿಲ್ಲ.ಹೀಗಾಗಿ ತಿಮ್ಮಪ್ಪ ಪರಿಚಯಸ್ಥರೊಬ್ಬರ ಸಹಾಯ ಪಡೆದು ಟಿವಿಎಸ್ ಬೈಕ್‍ನಲ್ಲಿಯೇ ಶವವನ್ನು ಸಾಗಿಸಿದ್ದಾರೆ. ಖಾಸಗಿ ಕಾರ್ ಬಾಡಿಗೆ ಪಡೆದು ಶವವನ್ನು ಸಾಗಿಸುವಂತೆ ಸ್ಥಳೀಯರು ಸಲಹೆ ನೀಡಿದರೂ ಹಣವಿಲ್ಲದಿದ್ದುದರಿಂದ ಟಿವಿಎಸ್ ಬೈಕ್‌ನಲ್ಲಿಯೇ ಮಗಳ ದೇಹವನ್ನು ಸಾಗಿಸಿದ್ದಾರೆ.
 
ರತ್ನವ್ವ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅಲ್ಲಿ ವೈದ್ಯರು ಇಲ್ಲದಿದ್ದುರಿಂದ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾಳೆ ಎಂದು ಸಹ ಹೇಳಲಾಗುತ್ತಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್, ಸೋನಿಯಾ ಜತೆಗಿನ ಭೇಟಿ ಕುಟುಂಬದ ಜತೆ ಸಮಯ ಕಳೆದ ಹಾಗೇ: ಎಂಕೆ ಸ್ಟಾಲಿನ್‌

ಬಿಟ್ರೇ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ಫ್ರೀಯಾಗಿ ರಾಯಭಾರಿಯಾಗ್ತೀನಿ: ವಾಟಾಳ್ ನಾಗರಾಜ್‌

ಕರಾಳ ನೆನಪು ಮಾಸುವ ಮುನ್ನವೇ ಮತ್ತೆ ಕೋವಿಡ್ ಭೀತಿ: ಸಿಲಿಕಾನ್ ಸಿಟಿಯಲ್ಲಿ ಮಗುವಿಗೆ ಸೋಂಕು ದೃಢ

Gang Rape: ಸಾಂಗ್ಲಿಯಲ್ಲಿ MBBS ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್‌

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಅಧಿಕಾರ ಸರ್ಕಾರಕ್ಕಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments