ಸಂಬಳ ಸಿಗದಿದ್ದುದಕ್ಕೆ ಎಟಿಎಮ್‌ನ್ನೇ ಚೂರುಚೂರಾಗಿಸಿದ

Webdunia
ಗುರುವಾರ, 28 ಜುಲೈ 2016 (10:19 IST)
ಸಂಬಳ ಹಾಕಿಲ್ಲವೆಂಬ ಸಿಟ್ಟಿನಲ್ಲಿ 31 ವರ್ಷದ ವ್ಯಕ್ತಿಯೋರ್ವ ಎಟಿಎಂ ಯಂತ್ರವನ್ನೇ ಒಡೆದು ಹಾಕಿದ ವಿಲಕ್ಷಣ ಘಟನೆ ಮುಂಬೈನ ಭಿವಂಡಿಯಲ್ಲಿ ನಡೆದಿದೆ.


ಆರೋಪಿಯನ್ನು ಸಿದ್ದಾರ್ಥ್ ಜಗ್ತಪ್ ಎಂದು ಗುರುತಿಸಲಾಗಿದ್ದು ಆತ ಗಾಯತ್ರಿನಗರದ ನಿವಾಸಿಯಾಗಿದ್ದಾನೆ. ನೀರಿನ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡುವ ಆತ ಸಂಬಳ ನೀಡಿಲ್ಲವೆಂದು ಹತಾಶನಾಗಿದ್ದ. ಬುಧವಾರ ಮುಂಜಾನೆ ಗಾಯತ್ರಿನಗರದಲ್ಲಿರುವ ಎಕ್ಸಿಸ್ ಬ್ಯಾಂಕ್‌ಗೆ ಹೋದ ಆತ ಎಟಿಎಂ ಒಡೆದು ಹಣ ದೋಚಲು ಯತ್ನಿಸಿದ್ದಾನೆ. ಆದರೆ ಹಣವನ್ನು ಕದಿಯಲು ವಿಫಲನಾಗಿದ್ದಾನೆ.

ಆತ ಅಲ್ಲಿಂದ ತೆರಳಿದ ಬಳಿಕ ಹಣ ತೆಗೆಯಲು ಬಂದಿದ್ದ ಮತ್ತೊಬ್ಬ ಗ್ರಾಹಕ ಎಟಿಎಂ ಧ್ವಂಸವಾಗಿರುವುದರ ಬಗೆಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಸ್ಥಳಕ್ಕಾಗಮಿಸಿದ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಾ ಸಿನ್ ಮಂಜುನಾಥ್ ಯಾವಾಗಲೂ ಹೇಳುವ ಆರು ಔಷಧಿಗಳು ಇವು

ಡಿಕೆ ಶಿವಕುಮಾರ್ ಗೆ ಠಕ್ಕರ್ ಕೊಡಲು ಸಿದ್ದರಾಮಯ್ಯ ಬಣದ ಭರ್ಜರಿ ಪ್ಲ್ಯಾನ್

ಸಿದ್ದರಾಮಯ್ಯಗೆ ಹೀಗ್ಯಾಕೆ ಮಾಡಿದ್ರು ಡಿಕೆ ಶಿವಕುಮಾರ್

ಆಪರೇಷನ್ ಸಿಂಧೂರ್ ಮೊದಲ ದಿನವೇ ಭಾರತವನ್ನು ಪಾಕಿಸ್ತಾನ ಸೋಲಿಸಿತ್ತು: ಕಾಂಗ್ರೆಸ್ ನಾಯಕ ಪೃಥ್ವಿರಾಜ್ ವಿವಾದ

Karnataka Weather: ವಿಪರೀತ ಚಳಿ ನಡುವೆ ಇಂದು ಈ ಜಿಲ್ಲೆಗಳಲ್ಲಿ ತುಂತುರು ಮಳೆ ಸಂಭವ

ಮುಂದಿನ ಸುದ್ದಿ
Show comments