Select Your Language

Notifications

webdunia
webdunia
webdunia
webdunia

ನಾಯಿಗೆ ತ್ರಿವರ್ಣ ಧ್ವಜ ತೊಡಿಸಿದ್ದವನ ಬಂಧನ

ನಾಯಿಗೆ ತ್ರಿವರ್ಣ ಧ್ವಜ ತೊಡಿಸಿದ್ದವನ ಬಂಧನ
ಅಹಮದಾಬಾದ್ , ಮಂಗಳವಾರ, 9 ಫೆಬ್ರವರಿ 2016 (13:16 IST)
ಗಣರಾಜ್ಯೋತ್ಸವ ನಿಮಿತ್ತ ನಡೆದ ಸಮಾರಂಭದಲ್ಲಿ ಸಾಕು ನಾಯಿಗೆ ತ್ರಿವರ್ಣ ಧ್ವಜದ ಬಟ್ಟೆ ಹಾಕಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿದ್ದ ಸೂರತ್ ಮೂಲದ ಪ್ರಾಪರ್ಟಿ ಡೀಲರ್​ನನ್ನು ಗುಜರಾತ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ರಾಷ್ಟ್ರಧ್ವಜಕ್ಕೆ ಅಪಮಾನ ನೀಡಿದ ಆರೋಪದ ಮೇಲೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. 
 
ಬಂಧಿತನನ್ನು ಭರತ್ ಗೊಹ್ಲಿ (40) ಎಂದು ಗುರುತಿಸಲಾಗಿದ್ದು, ಅಜೀಜ್ ಸೈಕಲ್​ವಾಲಾ ಎಂಬುವರು ನೀಡಿದ್ದ ದೂರಿನ ಮೇಲೆ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಉಮ್ರಾ ಪೊಲೀಸ್ ಠಾಣೆ ಇನ್ಸಪೆಕ್ಟರ್ ಜಿ.ಎ.ಸರ್ವೈಯಾ ಹೇಳಿದ್ದಾರೆ. 
 
ಜನವರಿ 26, ಪ್ರಜಾರಾತ್ಯೋತ್ಸವ ದಿನದಂದು ಸೂರತ್​ನ ಕಾರ್ಗಿಲ್ ಚೌಕ್​ನಲ್ಲಿ ಸಾಕು ಪ್ರಾಣಿಗಳಿಗೆ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಮ್ಮ ನಾಯಿಯನ್ನು ಕರೆತಂದಿದ್ದ ಭರತ್ ಅದಕ್ಕೆ ತ್ರಿವರ್ಣ ಧ್ವಜದ ಬಟ್ಟೆ ತೊಡಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಜೀಜ್ ಸೈಕಲ್​ವಾಲಾ ಈ ಕುರಿತು ದೂರು ದಾಖಲಿಸಿದ್ದರು. ಆದರೆ ಪೊಲೀಸರು ಅವರ ವಿರುದ್ಧ ಯಾವ ಕ್ರಮವನ್ನು ತೆಗೆದುಕೊಂಡಿರಲಿಲ್ಲ.
 
ನಿನ್ನೆ ನಾಯಿಗೆ ತ್ರಿವರ್ಣ ಧ್ವಜ ಹಾಕಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಓಡಾಡಲು ಪ್ರಾರಂಭವಾದಾಗ ರಾಷ್ಟ್ರೀಯ ಮನ್ನಣೆ ಆ್ಯಕ್ಟ ಪ್ರಕಾರ ಅವರನ್ನು ಬಂಧಿಸಲಾಯಿತು. ಬಳಿಕ ಜಾಮೀನಿನ ಮೇಲೆ ಅವರು ಹೊರಬಂದರು ಎಂದು  ಜಿ.ಎ.ಸರ್ವೈಯಾ ತಿಳಿಸಿದ್ದಾರೆ. 
 
ತಾನು ಉದ್ದೇಶಪೂರ್ವಕವಾಗಿ ಈ ತಪ್ಪನ್ನು ಮಾಡಿರಲಿಲ್ಲ, ನನಗೆ ಕಾನೂನಿನ ಅರಿವಿರಲಿಲ್ಲ ಎಂದು ಗೋಹಿಲ್ ಹೇಳಿದ್ದಾರೆ.

Share this Story:

Follow Webdunia kannada