Webdunia - Bharat's app for daily news and videos

Install App

ಕಣ್ಣು ಹೊಡೆದವನಿಗೆ ಕಪಾಳಮೋಕ್ಷ

Webdunia
ಶುಕ್ರವಾರ, 24 ಏಪ್ರಿಲ್ 2015 (11:22 IST)
ತಮ್ಮ ಜತೆ ಅಸಭ್ಯವಾಗಿ ವರ್ತಿಸಿದ ಯುವಕನೊಬ್ಬನಿಗೆ ಆಪ್ ಪಕ್ಷದ ಶಾಸಕಿ ಅಲಕಾ ಲಾಂಬಾ ಕಪಾಳಮೋಕ್ಷ ಮಾಡಿದ್ದಾರೆ. 

ಅಲ್ಕಾರವರು ಹೆಸರಾಂತ ಕವಿ ಮಿರ್ಜಾ ಗಾಲಿಬ್ ಹವೇಲಿ ಪರಿಶೀಲನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ದುರ್ವರ್ತನೆ ತೋರಿದ 20 ವರ್ಷದ ಯುವಕನನ್ನು ಆಪ್ ಕಾರ್ಯಕರ್ತರು ಕೊಟ್ವಾಲಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. 
 
"ಆತ ನನ್ನನ್ನು ನೋಡಿ ಕಣ್ಣು ಮಿಟುಕಿಸುತ್ತಿದ್ದ ಮತ್ತು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ನಾನು ಪುರಭವನದ ಮುಂದೆ ಹೋದ ಮೇಲೂ ನನ್ನನ್ನು ಹಿಂಬಾಲಿಸಿದ ಆತ ಮತ್ತೆ ವಿಚಿತ್ರವಾಗಿ ವರ್ತಿಸಿದ. ಅದಕ್ಕೆ ನಾನು ಕೆನ್ನೆಗೆ ಬಾರಿಸಿದೆ", ಎಂದು ದಿಟ್ಟತನಕ್ಕೆ ಹೆಸರಾದ ಶಾಸಕಿ ಹೇಳುತ್ತಾರೆ. 
 
"ಆ ದುರುಳನಿಗೆ ನಾನು ಯಾರು ಎಂದು ಸಹ ತಿಳಿದಿಲ್ಲ. ಮೊದಲು ನಗೆಯಾಡಿದ, ಆಮೇಲೆ ಕಣ್ಣು ಹೊಡೆದ ಮತ್ತೆ ಹತ್ತಿರ ಬಂದು ಅಸಭ್ಯವಾಗಿ ನೋಡತೊಡಗಿದ. ಆಗ ನಾನು ಆತನಿಗೆ ಕಪಾಳಮೋಕ್ಷ ಮಾಡಿದೆ. ತಕ್ಷಣ ಸ್ಥಳದಿಂದ ಓಡಲು ಪ್ರಾರಂಭಿಸಿದ ಆತನನ್ನು ಪಕ್ಷದ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಸಿದರು. ಈಗ ಆತ ಜೈಲಿನ ಕಂಬಿ ಎಣಿಸುತ್ತಿದ್ದಾನೆ", ಎಂದು ದೆಹಲಿ ಸರ್ಕಾರದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿರುವ ಲಂಬಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಈಗ ಆತ ತಾನು ಮಾನಸಿಕ ರೋಗಿ ಎಂದು ವಾದಿಸುತ್ತಿದ್ದಾನೆ. ಆದರೆ ಇದನ್ನು ಸಾಬೀತು ಪಡಿಸುವಂತ ಯಾವುದೇ ದಾಖಲೆಗಳನ್ನು ಪ್ರಸ್ತುತ ಪಡಿಸಲು ಆತನ ಕುಟುಂಬಸ್ಥರು ವಿಫಲರಾಗಿದ್ದಾರೆ.
 
ಟ್ವಿಟರ್‌ನಲ್ಲೂ ಈ ಕುರಿತು ಬರೆದಿರುವ ಅವರು ಯುವಕನ ಭಾವಚಿತ್ರವನ್ನು ಸಹ ಪ್ರಕಟಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments