Select Your Language

Notifications

webdunia
webdunia
webdunia
webdunia

ನಗರಸಭೆ ಚುನಾವಣೆ: ಬಂಗಾಳ ರಾಜಕೀಯದ ಮಹಾರಾಣಿಯಾಗಿ ಹೊರಹೊಮ್ಮಿದ ಮಮತಾ ಬ್ಯಾನರ್ಜಿ

ನಗರಸಭೆ ಚುನಾವಣೆ: ಬಂಗಾಳ ರಾಜಕೀಯದ ಮಹಾರಾಣಿಯಾಗಿ ಹೊರಹೊಮ್ಮಿದ ಮಮತಾ ಬ್ಯಾನರ್ಜಿ
ಕೋಲ್ಕತಾ , ಮಂಗಳವಾರ, 28 ಏಪ್ರಿಲ್ 2015 (20:56 IST)
ನಗರದ ನಗರಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್‌ಗೈದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಕ್ಷದ ಕಾರ್ಯಕರ್ತರೊಂದಿಗೆ ಸಂಭ್ರಮವನ್ನು ಆಚರಿಸಿದ್ದಾರೆ.

 ಕೇವಲ ಕೋಲ್ಕತಾ ಮಾತ್ರವಲ್ಲದೇ ಪ್ರತಿಯೊಂದು ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸಿ ದಾಖಲೆಯನ್ನು ಬರೆದಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಬಿಜೆಪಿ ಅಲೆಯಿದೆ. ಬಿಜೆಪಿಯಿಂದ ಭಾರಿ ಪೈಪೋಟಿ ಎದುರಿಸುತ್ತಿದೆ ಎನ್ನುವ ವರದಿಗಳು ಸುಳ್ಳೆಂದು ಚುನಾವಣೆ ಫಲಿತಾಂಶ ಸಾಬೀತು ಮಾಡಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಾರಿಸಿದ್ದ ಜಯಭೇರಿ ಮುಂದುವರಿಯಲಿದೆ ಎನ್ನುವ ಬಿಜೆಪಿ ಬಯಕೆ ಬಯಕೆಯಾಗಿಯೇ ಉಳಿದಿದೆ.

ಕೋಲ್ಕತಾ ನಗರಸಭೆ ಚುನಾವಣೆಯಲ್ಲಿ 144 ವಾರ್ಡ್‌ಗಳಲ್ಲಿ 114 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಪಶ್ಚಿಮ ಬಂಗಾಳದ ನಗರಸಭೆ ಚುನಾವಣೆಯ ಇತಿಹಾಸದಲ್ಲಿಯೇ ಶೇ,80 ರಷ್ಟು ಸ್ಥಾನಗಳನ್ನು ಯಾವುದೇ ಪಕ್ಷ ತನ್ನದಾಗಿಸಿಕೊಂಡಿಲ್ಲ  

34 ವರ್ಷಗಳ ರಾಜ್ಯಭಾರ ಮಾಡಿದ್ದ ಎಡಪಕ್ಷಗಳು ಕೇವಲ 15 ಸ್ಥಾನಗಳಲ್ಲಿ ಜಯಗಳಿಸಿದ್ದು, ಬಿಜೆಪಿ ಕೇವಲ ಏಳು ಸ್ಥಾನಗಳಲ್ಲಿ ಜಯಗಳಿಸಿದ್ದರೆ ಕಾಂಗ್ರೆಸ್ ಕನಿಷ್ಠ 5 ಸ್ಥಾನಗಳಲ್ಲಿ ಗೆಲುವು ಪಡೆದಿದೆ.

Share this Story:

Follow Webdunia kannada