Select Your Language

Notifications

webdunia
webdunia
webdunia
webdunia

ರಾಜ್ಯಸಭೆ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರಾ ಮಲ್ಯ?

ರಾಜ್ಯಸಭೆ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರಾ ಮಲ್ಯ?
ನವದೆಹಲಿ , ಮಂಗಳವಾರ, 26 ಏಪ್ರಿಲ್ 2016 (16:15 IST)
ಸಾವಿರಾರು ಕೋಟಿ ಸಾಲ ಮಾಡಿಕೊಂಡು ಲಂಡನ್ನಿಗೆ ಪಲಾಯನಗೈದಿರುವ ಮದ್ಯ ದೊರೆ ವಿಜಯ್ ಮಲ್ಯ ಅವರ ರಾಜ್ಯಸಭಾ ಸದಸ್ಯತ್ವ ಸಹ ಕೈತಪ್ಪುವ ಸಾಧ್ಯತೆ ಇದೆ. ಈಗಾಗಲೇ ಅವರ ಪಾಸ್‌ಪೋರ್ಟ್‌ ಕೂಡ ರದ್ದಾಗಿದೆ.
 
9,431.65 ಕೋಟಿ ರೂಪಾಯಿ ಸಾಲ ಮಾಡಿಕೊಂಡು ಅದನ್ನು ಹಿಂತಿರುಗಿಸದೆ ವಿದೇಶಕ್ಕೆ ಹಾರಿರುವ ಮಲ್ಯ ಅವರ ರಾಜ್ಯಸಭಾ ಸದಸ್ಯತ್ವ ರದ್ದು ಮಾಡಲು ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಕರಣ್ ಸಿಂಗ್ ನೇತೃತ್ವದ ರಾಜ್ಯಸಭಾ ನೀತಿ ಸಮಿತಿ ಒಮ್ಮತದ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತದೆ.
 
ಈ ಕುರಿತು ಒಂದು ವಾರದಲ್ಲಿ ಉತ್ತರಿಸುವಂತೆ ಕರ್ನಾಟಕದಿಂದ ಆಯ್ಕೆಯಾಗಿರುವ ರಾಜ್ಯಸಭೆಯ ಸ್ವತಂತ್ರ ಸದಸ್ಯ ಮಲ್ಯ ಅವರಿಗೆ ಔಪಚಾರಿಕವಾಗಿ ನೋಟಿಸ್ ಕೂಡ ಜಾರಿ ಮಾಡಲಾಗಿದ್ದು ಅವರ ಉಚ್ಛಾಟನೆ ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ. 
 
ಮೇ 3 ರಂದು ಮತ್ತೆ ಸಭೆ ಸೇರಿ ಮಲ್ಯ ಅವರ ಪ್ರಕರಣದ ಕುರಿತು ಚರ್ಚಿಸಲು ಸಮಿತಿ ನಿರ್ಧರಿಸಿದೆ. 
 
ಜೂನ್‌ನಲ್ಲಿ ಮಲ್ಯ ರಾಜ್ಯಸಭಾ ಸದಸ್ಯತ್ವ ಕೊನೆಗೊಳ್ಳುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .
 

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಾಖಂಡ ಬಿಕ್ಕಟ್ಟು: ರಾಜ್ಯ ಸಭಾ ಕಲಾಪ ಮುಂದೂಡಿಕೆ