Webdunia - Bharat's app for daily news and videos

Install App

ಜಾಟ್ ಸಮುದಾಯದ ನಾಯಕರು ಶಾಂತಿ, ಅಹಿಂಸೆ ಕಾಪಾಡಿಕೊಳ್ಳಲಿ: ಮಲ್ಲಿಕಾ ಶೆರಾವತ್ ಮನವಿ

Webdunia
ಮಂಗಳವಾರ, 23 ಫೆಬ್ರವರಿ 2016 (17:29 IST)
ಜಾಟ್ ಸಮುದಾಯದ ಜನತೆ ಮೀಸಲಾತಿಗೆ ಒತ್ತಾಯಿಸಿ ಹೋರಾಟ ಮುಂದುವರಿಸಿರುವಂತೆಯೇ,ಪ್ರತಿಭಟನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ ಎಂದು ಬಾಲಿವುಡ್ ಹಾಟ್ ಹಾಟ್ ನಟಿ ಮಲ್ಲಿಕಾ ಶೆರಾವತ್ ಮನವಿ ಮಾಡಿದ್ದಾರೆ. 
 
ಶಿಕ್ಷಣ ಮತ್ತು ಉದ್ಯೋಗದಲ್ಲಿ ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಹೋರಾಟ ಮುಂದುವರಿಸಿದ್ದಾರೆ. ಕೆಲ ಕಡೆ ಹಿಂಸಾಚಾರಗಳು ನಡೆದಿರುವ ವರದಿಗಳು ಬಹಿರಂಗವಾಗುತ್ತಿದ್ದಂತೆ ಶೆರಾವತ್, ಶಾಂತಿ ಕಾಪಾಡಿಕೊಳ್ಳಲು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ.
 
ಬಾಲಿವುಡ್‌ನ ಮರ್ಡರ್ ಚಿತ್ರದ ಖ್ಯಾತ ನಟಿ ಮಲ್ಲಿಕಾ ಶೆರಾವತ್, ಹರಿಯಾಣಾದ ಹಿಸಾರ್ ಜಿಲ್ಲೆಯ ಚಿಕ್ಕ ಗ್ರಾಮದಲ್ಲಿ ಜನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಜಾಟ್ ಸಮುದಾಯದ ಜನರು ಶಾಂತಿ ಮತ್ತು ಅಹಿಂಸೆಯನ್ನು ಕಾಪಾಡಿಕೊಳ್ಳಬೇಕು ಎನ್ನುವುದು ನನ್ನ ಮನವಿಯಾಗಿದೆ ಎಂದು ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
 
ಖ್ವಾಯಿಷ್ ಮತ್ತು ಮರ್ಡರ್ ಸೇರಿದಂತೆ ಕಳೆದ ವರ್ಷ 2015ರಲ್ಲಿ ಬಿಡುಗಡೆಯಾದ ಡರ್ಟಿ ಪಾಲಿಟಿಕ್ಸ್ ಚಿತ್ರದ ಪ್ರಮುಖ ಪಾತ್ರದಲ್ಲಿ ಮಲ್ಲಿಕಾ ಶೆರಾವತ್ ನಟಿಸಿದ್ದಾರೆ.
 
ಕಳೆದ ವಾರ ಜಾಟ್ ಸಮುದಾಯಕ್ಕೆ ಸೇರಿದ ಬಾಲಿವುಡ್ ನಟ ರಣದೀಪ್ ಹೂಡಾ, ಜಾಟ್ ನಾಯಕರು ಶಾಂತಿಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ ಎಂದು ಮನವಿ ಮಾಡಿದ್ದರು.  

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments