Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರ, ಹರಿಯಾಣಾ ರಾಜ್ಯಗಳಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿದೆ: ಕಾಂಗ್ರೆಸ್ ನಾಯಕ

ಮಹಾರಾಷ್ಟ್ರ, ಹರಿಯಾಣಾ ರಾಜ್ಯಗಳಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿದೆ: ಕಾಂಗ್ರೆಸ್ ನಾಯಕ
ನವದೆಹಲಿ , ಭಾನುವಾರ, 19 ಅಕ್ಟೋಬರ್ 2014 (12:04 IST)
ಮಹಾರಾಷ್ಟ್ರ, ಹರ್ಯಾಣ ವಿಧಾನ ಸಭೆ ಚುನಾವಣೆ ಫ‌ಲಿತಾಂಶ ಹೊರಬೀಳುವ ಒಂದು ದಿನ ಮೊದಲೇ ಕಾಂಗ್ರೆಸ್‌ ಪಕ್ಷ ಸೋಲೊಪ್ಪಿಕೊಂಡಿದೆ. ಎರಡೂ ರಾಜ್ಯಗಳಲ್ಲೂ ಪಕ್ಷ ಮೂರನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಇಬ್ಬರು ನಾಯಕರು ಹೇಳಿಕೊಂಡಿದ್ದಾರೆ. 
 
ಮಹಾರಾಷ್ಟ್ರದಲ್ಲಾಗಲಿ, ಹರ್ಯಾಣದಲ್ಲೇ ಆಗಲಿ ಪಕ್ಷ ಅತಿಯಾದ ವಿಶ್ವಾಸ ಹೊಂದಿಲ್ಲ. ಮಹಾರಾಷ್ಟ್ರದಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿದ್ದೇವೆ. ಹರ್ಯಾಣದಲ್ಲಿ 10 ವರ್ಷ ರಾಜ್ಯಭಾರ ಮಾಡಿದ್ದೇವೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಆಡಳಿತ ವಿರೋಧಿ ಅಲೆಯಲ್ಲಿ ಸಿಲುಕಿದೆ. ಎರಡೂ ರಾಜ್ಯಗಳಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ ಎಂದು ಇಬ್ಬರು ನಾಯಕರು ತಿಳಿಸಿದ್ದಾರೆ. 
 
ಲೋಕಸಭೆ ಚುನಾವಣೆ ರೀತಿಯಲ್ಲೇ ಮತದಾನವಾದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಮಿತ್ರಕೂಟಕ್ಕೆ 244, ಹರ್ಯಾಣದಲ್ಲಿ ಬಿಜೆಪಿ- ಹರ್ಯಾಣ ಜನಹಿತ ಕಾಂಗ್ರೆಸ್‌ಗೆ 58 ಸ್ಥಾನಗಳು ಸಿಗಲಿವೆ. ಕಾಂಗ್ರೆಸ್ಸಿಗೆ ಹರ್ಯಾಣದಲ್ಲಿ ಕೇವಲ 8 ಸ್ಥಾನಗಳಷ್ಟೇ ಲಭಿಸಲಿವೆ. ಮಹಾರಾಷ್ಟ್ರ ದಲ್ಲಿ ಬಿಜೆಪಿ, ಶಿವಸೇನೆ ಮೊದಲೆರಡು ಸ್ಥಾನ ಗಳಿಸಲಿವೆ. ಹರ್ಯಾಣದಲ್ಲಿ ಬಿಜೆಪಿ ಹಾಗೂ ಐಎನ್‌ಎಲ್‌ಡಿಗೆ ಮೊದಲ, ಎರಡನೇ ಸ್ಥಾನ ಲಭಿಸಲಿದೆ ಎಂದು ನಾಯಕರು ಹೇಳುತ್ತಿದ್ದಾರೆ. 
 
ಬಿಜೆಪಿ ಬೆಂಬಲಿಸಲಿ: ಒಂದು ವೇಳೆ ಮಹಾರಾಷ್ಟ್ರದಲ್ಲಿ ಅತಂತ್ರ ಸ್ಥಿತಿ ಸೃಷ್ಟಿಯಾದಲ್ಲಿ ಬಿಜೆಪಿ ನಮ್ಮನ್ನು ಬೆಂಬಲಿಸಲಿ ಎಂದು ಶಿವಸೇನೆ ವಕ್ತಾರ ಸಂಜಯ ರಾವುತ್‌ ಹೇಳಿದ್ದಾರೆ. ಆದರೆ ಬಿಜೆಪಿ ಮಾತ್ರ ಬಹುಮತ ಪಡೆಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದೆ. 
 

Share this Story:

Follow Webdunia kannada