Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರ, ಹರಿಯಾಣಾ ಚುನಾವಣೆ ಗೆಲುವು ಮೋದಿ ಗೋಲುವಾಗಿದೆ: ಬಿಜೆಪಿ

ಮಹಾರಾಷ್ಟ್ರ, ಹರಿಯಾಣಾ ಚುನಾವಣೆ ಗೆಲುವು ಮೋದಿ ಗೋಲುವಾಗಿದೆ: ಬಿಜೆಪಿ
ನವದೆಹಲಿ , ಭಾನುವಾರ, 19 ಅಕ್ಟೋಬರ್ 2014 (12:51 IST)
ಮಹಾರಾಷ್ಟ್ರ ಮತ್ತು ಹರಿಯಾಣಾ ವಿಧಾಸಭೆ ಚುನಾವಣೆ ಗೆಲುವು ಪ್ರಧಾನಮಂತ್ರಿ ನರೇಂದ್ರಯವರ ಗೆಲುವಾಗಿದೆ ಎಂದು ಬಿಜೆಪಿ ಮುಖಂಡ ಶಾ ನವಾಜ್ ಹುಸೇನ್ ಸಂತಸ ವ್ಯಕ್ತಪಡಿಸಿದ್ದಾರೆ. 
 
ಉಭಯ ರಾಜ್ಯಗಳ ಚುನಾವಣೆ ಫಲಿತಾಂಶ ನೋಡಿದಲ್ಲಿ ಮೋದಿ ನಾಯಕತ್ವದ ಮೇಲೆ ಜನತೆ ವಿಶ್ವಾಸವಿಟ್ಟಿದ್ದಾರೆ ಎನ್ನುವುದು ಸಾಬೀತಾಗುತ್ತದೆ. ಕೇಂದ್ರದಲ್ಲಿ ಸರಕಾರ ರಚಿಸಲು ಮೋದಿಗೆ ಮತ ನೀಡಿದ ಜನತೆ ಇದೀಗ ರಾಜ್ಯಗಳಲ್ಲಿ ಮೋದಿ ಅಡಳಿತವಿರಲು ಬಯಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
 
ಹರಿಯಾಣಾದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲಿದ್ದು, ಮಹಾರಾಷ್ಟ್ರದಲ್ಲಿ ಮೈತ್ರಿಕೂಟ ಪಕ್ಷದೊಂದಿಗೆ ಸರಕಾರ ರಚಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ವಕ್ತಾರ ಶಾ ನವಾಜ್ ಹುಸೇನ್ ತಿಳಿಸಿದ್ದಾರೆ.  
 

Share this Story:

Follow Webdunia kannada