Select Your Language

Notifications

webdunia
webdunia
webdunia
webdunia

ಮೋದಿಯ ಜತೆ ವೇದಿಕೆ ಹಂಚಿಕೊಳ್ಳಲಾರೆ ಎಂದ ಮಹಾರಾಷ್ಟ್ರ ಸಿಎಂ

ಮೋದಿಯ ಜತೆ ವೇದಿಕೆ ಹಂಚಿಕೊಳ್ಳಲಾರೆ ಎಂದ ಮಹಾರಾಷ್ಟ್ರ ಸಿಎಂ
ಮುಂಬೈ , ಬುಧವಾರ, 20 ಆಗಸ್ಟ್ 2014 (18:58 IST)
ನಾಗ್ಪುರ್ ಮೆಟ್ರೋ ಉದ್ಘಾಟನಾ ಸಮಾರಂಭ ಆಗಸ್ಟ್ 21ರಂದು ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿಯವರ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಹೇಳಿದ್ದಾರೆ. 

ಕೈಥಲ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ  ಮೋದಿಯವರ ಜತೆ ವೇದಿಕೆ ಹಂಚಿಕೊಂಡ ಹರಿಯಾಣಾದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ  ಅವರು ಜನಸಮೂಹದಿಂದ ಅಪಹಾಸ್ಯಕ್ಕೆ ಗುರಿಯಾದ ಘಟನೆ ವರದಿಯಾದ ತರುವಾಯ ಚವಾಣ್ ಈ ನಿರ್ಧಾರಕ್ಕೆ ಬಂದಿದ್ದಾರೆ. 
 
ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ ಅವರು "  ಮೋದಿಯವರು ಈ ಹಿಂದೆಯು ಕೂಡ ತಮ್ಮ ಎಲ್ಲೆ ಮೀರಿ ವರ್ತಿಸಿದ್ದರು. ಆದರೆ ಪ್ರಧಾನಿ ಪದವಿಯ ಗರಿಮೆಗೆ ಗೌರವ ನೀಡುವ ಉದ್ದೇಶದಿಂದಾಗಿ ನಾನು ಮೌನವನ್ನು ಕಾಪಾಡಿಕೊಂಡಿದ್ದೆ. ಆದರೆ, ಸರಕಾರಿ ಕಾರ್ಯಕ್ರಮಗಳಿಗೆ ರಾಜಕೀಯದ ಲೇಪ ಹಚ್ಚುವುದನ್ನು ಅವರು ಮುಂದುವರೆಸಿದ್ದಾರೆ.  ನಾನು ಅವರ ಜತೆ ಕಾರ್ಯಕ್ರಮಗಳಿಗೆ ಹೋಗುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ. 
 
ಪ್ರಧಾನಿ ಮೋದಿಯವರು ಪಾಲ್ಗೊಂಡಿದ್ದ, ಕೈಥಲ್‌ನಲ್ಲಿ ನಡೆದ ಮೆರವಣಿಗೆಯೊಂದನ್ನು  ಉದ್ದೇಶಿಸಿ ಮಾತನಾಡುತ್ತಿದ್ದ ಹರಿಯಾಣಾದ ಮುಖ್ಯಮಂತ್ರಿ ಅಹಿತಕರ ಸನ್ನಿವೇಶವನ್ನು ಎದುರಿಸಬೇಕಾಯಿತು. ನೆರೆದಿದ್ದ ಜನರು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಅವರನ್ನು ಅಪಮಾನಿತರಾಗುವಂತೆ ಮಾಡಿದರು. 
 
ಹೂಡಾ  ಅವರ ಭಾಷಣದುದ್ದಕ್ಕೂ  ಅಡ್ಡಿಯನ್ನುಂಟು ಮಾಡಿದ  ಜನಸಾಗರ ಅವರ ಮಾತುಗಳು ಯಾರಿಗೂ ಕೇಳಿಸದಷ್ಟು ಗಲಾಟೆ ಮಾಡಿದರು. 
 
 ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಯೋಜಿಸಿದ್ದ ಅಧಿಕೃತ ಕಾರ್ಯಕ್ರಮವಾಗಿದ್ದರೂ ಕೂಡ,  "ಮೋದಿ ಮೋದಿ"  ಎಂದು ಜೋರಾಗಿ ಕೂಗಿದ ಜನರು ಹೂಡಾ ವಿರೋಧಿ ಘೋಷಣೆಗಳನ್ನು ಕೂಗಿದರು. 
 
ಇದರಿಂದ ತೀವೃ ಮುಜುಗರ, ಬೇಸರ ಪಟ್ಟ ಸಿಎಂ ಇನ್ನು ಮುಂದೆ ಮೋದಿಯವರ ಜತೆ ವೇದಿಕೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳಿದರು. 
 
ಮೂಲಗಳ ಪ್ರಕಾರ  ಕಾಂಗ್ರೆಸ್ ಹೈಕಮಾಂಡ್ ಕೂಡ ತಮ್ಮ ಪಕ್ಷದ ಮುಖ್ಯಮಂತ್ರಿಗಳಿಗೆ ಮೋದಿಯವರ ಜತೆ ವೇದಿಕೆ ಹಂಚಿಕೊಳ್ಳುವುದರಿಂದ ದೂರವಿರಿ ಎಂದು ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ. 

Share this Story:

Follow Webdunia kannada