Webdunia - Bharat's app for daily news and videos

Install App

ಬಿಎಂಸಿ ಗೆಲುವು ಪ್ರಧಾನಿ ಮೋದಿ ನಾಯಕತ್ವಕ್ಕೆ ಸಂದ ಜಯವಾಗಿದೆ: ಫಡ್ನವೀಸ್

Webdunia
ಗುರುವಾರ, 23 ಫೆಬ್ರವರಿ 2017 (19:00 IST)
ಮುಂಬೈ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸಲು ಜನತೆ ಪ್ರಧಾನಿ ಮೋದಿಯವರಿಗೆ ತೋರಿಸಿದ ವಿಶ್ವಾಸ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಪಾರದರ್ಶಕ ಕಾರ್ಯನಿರ್ವಹಣೆಯನ್ನು ಮೆಚ್ಚಿ ಅತ್ಯಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿದ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯಶಸ್ವಿ ನಾಯಕತ್ವ, ಅವರ ಮೇಲಿರುವ ನಂಬಿಕೆ ಬಿಜೆಪಿ ಪಕ್ಷ ಜಯಗಳಿಸಲು ನೆರವಾಗಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
 
ಮುಂಬೈ ಮಹಾನಗರಪಾಲಿಕೆಯಲ್ಲಿ ಬಿಜೆಪಿ 81 ಸ್ಥಾನಗಳಲ್ಲಿ ಜಯಗಳಿಸಿ ಎರಡನೇ ಸ್ಥಾನ ಪಡೆದಿದೆ. ಠಾಣೆ, ಉಲ್ಲಾಸ್‌ನಗರ್, ನಾಸಿಕ್, ಪುಣೆ, ಪಿಂಪ್ರಿ-ಚಿಂಚವಾಡ್, ಸೋಲಾಪುರ್, ಅಕೋಲಾ, ಅಮರಾವತಿ ಮತ್ತು ನಾಗ್ಪುರ್ ಜಿಲ್ಲೆಗಳಲ್ಲೂ ಮಹಾನಗರಪಾಲಿಕೆಗಳಿಗೆ ಚುನಾವಣೆ ನಡೆದಿದೆ.
 
ಮತ್ತೊಂದೆಡೆ, ಚುನಾವಣೆ ನಡೆದ 10 ಮಹಾನಗರಪಾಲಿಕೆಗಳಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲನುಭವಿಸಿದ್ದು, ಕಾಂಗ್ರೆಸ್ ರಾಜ್ಯಘಟಕದ ಅಧ್ಯಕ್ಷ ಸಂಜಯ್ ನಿರುಪಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

ಮೊದಲು ಕೇಂದ್ರದಲ್ಲಿ ಅಧಿಕಾರ ಬನ್ನಿ, ಆಮೇಲೆ ಆರ್ ಎಸ್ಎಸ್ ಮಾಡುವಿರಂತೆ: ಪ್ರಿಯಾಂಕ್ ಖರ್ಗೆ ಟ್ರೋಲ್

ಡಾ ಮಂಜುನಾಥ್ ಪ್ರಕಾರ ಹೃದಯಾಘಾತಕ್ಕೆ ಇದೇ ಕಾರಣಗಳು: ಇದನ್ನು ಪಾಲಿಸಿದ್ರೆ ಸಾಕು

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ: ಜೀವ ಕಾಪಾಡಿದ ಡ್ಯೂಟಿ ಡಾಕ್ಟರ್

ಮುಂದಿನ ಸುದ್ದಿ
Show comments