Select Your Language

Notifications

webdunia
webdunia
webdunia
webdunia

ನ್ಯಾಯ ಕೋರಿ ಹೋದವನನ್ನೇ ಬಂಧಿಸಲು ಆದೇಶಿಸಿದ ಕೋರ್ಟ್

ನ್ಯಾಯ ಕೋರಿ ಹೋದವನನ್ನೇ ಬಂಧಿಸಲು ಆದೇಶಿಸಿದ ಕೋರ್ಟ್
ಚೆನ್ನೈ , ಶುಕ್ರವಾರ, 24 ಅಕ್ಟೋಬರ್ 2014 (18:43 IST)
ತನ್ನ ಮತ್ತು ತನ್ನ ಪತ್ನಿಯ ' ಮರ್ಯಾದೆ ಹತ್ಯೆಗೆ' ಸಂಚು ರೂಪಿಸಲಾಗಿದ್ದು,  ರಕ್ಷಣೆ ನೀಡಿ ಎಂದು ಮದ್ರಾಸ್ ಹೈಕೋರ್ಟ್ ಮೊರೆ ಹೋದ ವಕೀಲ ಎಸ್. ಅನ್ಬುರಾಜ್‌ಗೆ ನ್ಯಾಯ ಕೋರಿ ಹೋದ ತನಗೇನೆ ನ್ಯಾಯಾಲಯ ಬಂಧನದ ಆದೇಶ ನೀಡಬಹುದು ಎಂಬ ಕಲ್ಪನೆ ಕೂಡ ಇರಲಾರದು. 

"ದಂಪತಿಗಳಿಗೆ ಜೀವ ಬೆದರಿಕೆ ಇರುವುದರಿಂದ  ಅವರಿಗೆ ರಕ್ಷಣೆಯನ್ನು ನೀಡಲೇಬೇಕು. ಆದರೆ ಅಪ್ರಾಪ್ತ ಬಾಲೆಯನ್ನು ಮದುವೆಯಾಗಿರುವ ತಪ್ಪಿಗಾಗಿ ಅನ್ಬುರಾಜ್‌ನನ್ನು ಬಂಧಿಸಲು ಪೊಲೀಸರಿಗೆ ಯಾವುದೇ ಅಡೆತಡೆ ಇಲ್ಲ. ಅನ್ಬುರಾಜ್ ಪ್ರಾಪ್ತ ವಯಸ್ಕನಾಗಿದ್ದು, ಅಪ್ರಾಪ್ತೆಯನ್ನು ಮದುವೆಯಾಗಿರುವುದರಿಂದ ಆತ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾನೆ. ಆರೋಪಿಯನ್ನು ಬಂಧಿಸಲು ತನಿಖಾಧಿಕಾರಿಗಳು ಸ್ವತಂತ್ರರು. ಅಗತ್ಯ ಬಿದ್ದರೆ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹಾಜರುಪಡಿಸಿ" ಎಂದು ನ್ಯಾಯಮೂರ್ತಿ ಎಸ್. ನಾಗಮುತ್ತು ಆದೇಶ ನೀಡಿದ್ದಾರೆ. 
 
"ತನಿಖೆ ಮತ್ತು ವಿಚಾರಣೆ ಸೋಗಿನಡಿಯಲ್ಲಿ, ಅನ್ಬುರಾಜ್‌ಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು. ನಿರುದ್ವಿಗ್ನವಾಗಿ ತನಿಖೆ ಮಾಡಿ ಕಾನೂನುಬದ್ಧವಾದ ಅಂತಿಮ ವರದಿಯನ್ನು ಸಲ್ಲಿಸಬೇಕು " ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. 
 
ಹೈಕೋರ್ಟ್‪ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ  ಅನ್ಬುರಾಜ್ ಮಧುರೈ ಜಿಲ್ಲೆಯ ಉಸಿಲಪಟ್ಟಿಯ ನಿವಾಸಿಯಾದ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯೊಬ್ಬಳನ್ನು ವಿವಾಹವಾಗಿದ್ದರು. ಅವರಿಬ್ಬರ ಜೀವಕ್ಕೆ ಬೆದರಿಕೆ ಇದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು  ಒಪ್ಪುತ್ತಿಲ್ಲವಾದ್ದರಿಂದ ರಕ್ಷಣೆ ನೀಡಿ ಎಂದು ದಂಪತಿಗಳು ಕೋರ್ಟ್ ಮೊರೆ ಹೋಗಿದ್ದರು. ಬಾಲಕಿಯ ತಂದೆ ಆಕೆಯ ಮದುವೆಯನ್ನು 39 ವರ್ಷದ ವ್ಯಕ್ತಿಯ ಜತೆ ನಿಶ್ಚಯಿಸಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.  

Share this Story:

Follow Webdunia kannada