Select Your Language

Notifications

webdunia
webdunia
webdunia
webdunia

ಮೈದುನನ ಕತ್ತರಿಸಿದ ಗುಪ್ತಾಂಗದೊಂದಿಗೆ ಪೊಲೀಸ್ ಠಾಣೆಗೆ ಶರಣಾದ ಮಹಿಳೆ

ಮೈದುನನ ಕತ್ತರಿಸಿದ ಗುಪ್ತಾಂಗದೊಂದಿಗೆ ಪೊಲೀಸ್ ಠಾಣೆಗೆ ಶರಣಾದ ಮಹಿಳೆ
ಭೋಪಾಲ್ , ಗುರುವಾರ, 11 ಫೆಬ್ರವರಿ 2016 (21:01 IST)
32 ವರ್ಷ ವಯಸ್ಸಿನ ಮಹಿಳೆಯೊಬ್ಬಳು ತನ್ನ ಮೈದುನನ ಕತ್ತರಿಸಿದ ಗುಪ್ತಾಂಗದ ಭಾಗಗಳೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ. ಅವನನ್ನು ತಡೆಯಲು ಇದೊಂದೇ ದಾರಿಯಾಗಿತ್ತು ಎಂದು ಹೇಳಿಕೆ ನೀಡಿದ್ದಾಳೆ.
 
ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಿಳೆಯ ಮೈದುನನ್ನು ಆಸ್ಪತ್ರೆಗೆ ಕರೆದುಕೊಂಡು ಸಿದ್ದರಾಗುತ್ತಿರುವಾಗಲೇ ಆತ ಮನೆಯ ಮುಂದಿನ ಮರಕ್ಕೆ ನೇಣು ಬಿಗಿದುಕೊಂಡು ಶರಣಾಗಿದ್ದಾನೆ.
 
ಸಿಧಿ ಜಿಲ್ಲೆಯ ಚುರಹಟ್ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ನಿದ್ರೆಯ ಮಂಪರಿನಲ್ಲಿದ್ದ ಪೊಲೀಸರಿಗೆ ಮಹಿಳೆ ಗುಪ್ತಾಂಗವನ್ನು ಹಿಡಿದು ಠಾಣೆ ಪ್ರವೇಶಿಸುತ್ತಿದ್ದಂತೆ ನಿದ್ರೆಯಲ್ಲಿಯೇ ಹೌಹಾರಿದ್ದಾರೆ.
 
ಮಹಿಳೆಯ ಪತಿ ನಾಸಿಕ್‌ನಲ್ಲಿದ್ದು, ಆಕೆ ಮೈದುನನೊಂದಿಗೆ ವಾಸವಾಗಿದ್ದಳು. ಮೈದುನ ಪ್ರತಿನಿತ್ಯ ಆಕೆಯ ಮೇಲೆ ಅತ್ಯಾಚಾರವೆಸಗುತ್ತಿದ್ದನು ಎನ್ನಲಾಗಿದೆ.
 
ಕೊನೆಗೂ ಆತನ ಕಿರುಕುಳಕ್ಕೆ ಬೇಸತ್ತು ಕುಡುಗೋಲಿನಿಂದ ಆತನ ಗುಪ್ತಾಂಗವನ್ನು ಕತ್ತರಿಸಿ ಹಾಕಿದ್ದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
 
ಮಹಿಳೆ ಮಾನಸಿಕವಾಗಿ ಸ್ಥಿರವಾಗಿದ್ದು, ಇದೊಂದು ವಿಚಿತ್ರ ಪ್ರಕರಣವಾಗಿದ್ದರಿಂದ ತನಿಖೆ ನಡೆಸಿದ ನಂತರ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬಿದ್ ಕಾನ್ ತಿಳಿಸಿದ್ದಾರೆ. 

Share this Story:

Follow Webdunia kannada