Webdunia - Bharat's app for daily news and videos

Install App

ಶ್ರೇಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ ಪರ್ವೇಜ್ ಮುಷ್ರಫ್ ಹೆಸರು ಸೇರ್ಪಡೆಗೊಳಿಸಿದ ಖಾಸಗಿ ಶಾಲೆ

Webdunia
ಗುರುವಾರ, 23 ಜುಲೈ 2015 (15:20 IST)
ಇಲ್ಲಿನ ಖಾಸಗಿ ಶಾಲೆಯೊಂದು ಮೂರನೇ ತರಗತಿಯ ಪಠ್ಯದಲ್ಲಿ ಪಾಕಿಸ್ತಾನದ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್‌ರನ್ನು ಶ್ರೇಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಆಘಾತ ಮೂಡಿಸಿದೆ. 
 
1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ರೂವಾರಿಯಾಗಿದ್ದ ಮಾಜಿ ಸೇನಾ ಸರ್ವಾಧಿಕಾರಿ ಮುಷ್ರಫ್, ಆರು ಮಂದಿ ಶ್ರೇಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದಲ್ಲದೇ ಅವರ ಭಾವಚಿತ್ರವನ್ನು ಪ್ರಕಟಿಸಿದೆ.
 
ಜಿಲ್ಲಾ ವಕೀಲರ ಸಂಘ ಖಾಸಗಿ ಶಾಲೆಯು ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ದೂರು ನೀಡಿದೆ. ಜಿಲ್ಲಾಡಳಿತ ತೆಗೆದುಕೊಂಡ ದಿಟ್ಟ ಕ್ರಮದಿಂದಾಗಿ ಇಲ್ಲಿನ ಅವಧಪುರಿಯಲ್ಲಿರುವ ಕ್ರೈಸ್ತ್ ಆಶಾ ಶಾಲೆ ಪುಸ್ತಕವನ್ನು ಹಿಂದಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ. 
 
ಪಂಕಜ್ ಜೈನ್ ಬರೆದ ಪುಸ್ತಕವನ್ನು ಮುದ್ರಿಸಿದ ಗಾಯಿತ್ರಿ ಪಬ್ಲಿಕೇಶನ್ಸ್ ಮುಷ್ರಫ್ ಭಾವಚಿತ್ರವನ್ನು ಹಾಕಿದ್ದಲ್ಲದೇ ಆರು ಮಂದಿ ಶ್ರೇಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿದೆ ಎಂದು ಜಿಲ್ಲಾ ವಕೀಲರ ಸಂಘದ ಅಮಿತ್ ಸಾಹು ಹಾಗೂ ವಿನಯ್ ಮಿಶ್ರಾ ಆರೋಪಿಸಿದ್ದಾರೆ. 
 
ಮುಷ್ರಫ್ ಪಾಕಿಸ್ತಾನದ ರಾಷ್ಟ್ರಪತಿಯಾಗಿದ್ದಾಗ ಕಾರ್ಗಿಲ್ ಯುದ್ಧ ಸಂಭವಿಸಿದೆ. ಕಾರ್ಗಿಲ್ ಯುದ್ಧದಲ್ಲಿ ನೂರಾರು ಸೇನಾ ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments