Select Your Language

Notifications

webdunia
webdunia
webdunia
webdunia

ಹೇಯ: ಹಾಲುಗಲ್ಲದ ಕಂದಮ್ಮನ ಮೇಲೆ ಶಾಲಾ ನಿರ್ದೇಶಕನಿಂದ ಅತ್ಯಾಚಾರ

ಹೇಯ: ಹಾಲುಗಲ್ಲದ ಕಂದಮ್ಮನ ಮೇಲೆ ಶಾಲಾ ನಿರ್ದೇಶಕನಿಂದ ಅತ್ಯಾಚಾರ
ಭೋಪಾಲ್ , ಮಂಗಳವಾರ, 28 ಫೆಬ್ರವರಿ 2017 (13:00 IST)
ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರಗೈದ  ಖಾಸಗಿ ನರ್ಸರಿ ಶಾಲೆಯ ನಿರ್ದೇಶಕನ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿ ಅನೂಪ್ ಪ್ರತಾಪ್ ಸಿಂಗ್ ( 27) ವಿರುದ್ಧ ಐಪಿಸಿ ಸೆಕ್ಷನ್ 376  ಮತ್ತು ಪೋಸ್ಕೋ ಕಾಯಿದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಶ್ ಚಂಡೇಲ್ ತಿಳಿಸಿದ್ದಾರೆ. ಮಗುವಿನ ಪೋಷಕರು ಕಳೆದೆರಡು ದಿನಗಳ ಹಿಂದೆ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು.
 
ಪೋಷಕರು ಎಂದಿನಂತೆ ಕಳೆದ ವಾರ ಒಂದು ದಿನ ಮಗುವನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗಿದ್ದಾಗ ಆಕೆ ಅಸ್ವಸ್ಥಳಾಗಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಹೇಳಿದರು. ಇದರಿಂದ ಆಘಾತಗೊಂಡ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
 
ಮಗುವನ್ನು ಕೇಳಲಾಗಿ ಸಿಂಗ್ ತನ್ನ ಜತೆ ಹೀಗೆಲ್ಲ ನಡೆದುಕೊಂಡ ಎಂದಾಕೆ ಹೇಳಿದ್ದಳು. 
 
ಆರೋಪಿಯನ್ನು ಇನ್ನು ಬಂಧಿಸಲಾಗಿಲ್ಲ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೇನು ಬೇರೆ ಕೆಲಸ ಇಲ್ವಾ, ಯಾವಾಗ್ಲೂ ಬಿಎಸ್‌ವೈ ಮಂತ್ರ ಜಪಿಸ್ತೀರಾ: ಸಿಎಂ