Select Your Language

Notifications

webdunia
webdunia
webdunia
webdunia

ಹೆಚ್ಚಿನ ಕ್ಷೇತ್ರಗಳ ಆಸೆ ವಿಚ್ಛೇದನಕ್ಕೆ ಕಾರಣವಾಗಬಹುದು : ಬಿಜೆಪಿಗೆ ಎಚ್ಚರಿಕೆ ನೀಡಿದ ಶಿವಸೇನೆ

ಹೆಚ್ಚಿನ ಕ್ಷೇತ್ರಗಳ ಆಸೆ ವಿಚ್ಛೇದನಕ್ಕೆ ಕಾರಣವಾಗಬಹುದು : ಬಿಜೆಪಿಗೆ ಎಚ್ಚರಿಕೆ ನೀಡಿದ ಶಿವಸೇನೆ
ಮುಂಬೈ , ಶನಿವಾರ, 13 ಸೆಪ್ಟಂಬರ್ 2014 (18:16 IST)
ಅಕ್ಟೋಬರ್ 15 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತಂತೆ ದೀರ್ಘಕಾಲದ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ನಡುವೆ ನಡೆಯುತ್ತಿರುವ ಉದ್ವಿಗ್ನ ಮಾತುಕತೆ ಸಂದರ್ಭದಲ್ಲಿ ಮಾತನಾಡಿರುವ  ಸೇನಾ ವರಿಷ್ಠ ಉದ್ಧವ್ ಠಾಕ್ರೆ ಅತಿಯಾದ ಕಾಮನೆ ವಿಚ್ಛೇದನಕ್ಕೆ ಕಾರಣವಾಗುತ್ತದೆ ಎಂದು ಕೇಸರಿ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಮ್ಮಿಶ್ರ ಮೈತ್ರಿಕೂಟಗಳು ವಿಜಯದ ಕನಸು ಕಾಣಬೇಕು. ಈ ಕಾರಣಕ್ಕೆ ಎಲ್ಲ ಪಕ್ಷಗಳು ಹೆಚ್ಚಿನ ಸೀಟುಗಳ ಬಯಕೆಯನ್ನು ತ್ಯಜಿಸಬೇಕು. ಹೆಚ್ಚಿನ ಸೀಟುಗಳು ಸಿಕ್ಕರೆ ಮಾತ್ರ ನಾವು ಮೈತ್ರಿಕೂಟದಲ್ಲಿರುತ್ತೇವೆ ಎನ್ನುವುದು ಸರಿಯಲ್ಲ ಎಂದು ತಮ್ಮ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಅವರು ಬರೆದಿದ್ದಾರೆ. 
 
ವಿಪರೀತ ಆಸೆ ವಿಚ್ಛೇದನಕ್ಕೆ ಕಾರಣವಾಗುತ್ತದೆ ಎಂದು ನೆನಪಿರಲಿ.  ನಾವೆಲ್ಲ ಆಡಳಿತದಲ್ಲಿ ಬದಲಾವಣೆಯನ್ನು ತರಲು ಬಯಸುತ್ತಿದ್ದೇವೆ. ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ಸೀಟುಗಳನ್ನು ಪಡೆಯದಿದ್ದರು ಕೂಡ, ಸರಕಾರ ರಚನೆಯಾಗುವಾಗ ಎಲ್ಲರಿಗೂ ಸಮಪಾಲು ಸಿಗಲಿದೆ. ಅವೆಲ್ಲಕೂ ಮೊದಲು ನಾವು ಅಧಿಕಾರಕ್ಕೆ ಬರಲು ಸಾಧ್ಯವಾಗಬೇಕು ಎಂದು ಅವರು ಹೇಳಿದ್ದಾರೆ. 
 
ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದ ವಿಜಯವನ್ನು ದಾಖಲಿಸಿದ ನಂತರ  ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಸೀಟು ಹಂಚಿಗೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಶಿವಸೇನೆಗಳು ವ್ಯಾಜ್ಯಗಳಲ್ಲಿ ತೊಡಗಿವೆ. 

Share this Story:

Follow Webdunia kannada