Select Your Language

Notifications

webdunia
webdunia
webdunia
webdunia

ಮಹಿಳಾ ನ್ಯಾಯಮೂರ್ತಿಗೆ ಲವ್ ಲೆಟರ್ ಬರೆದು ಜೈಲು ಸೇರಿದ ಭೂಪ

ಮಹಿಳಾ ನ್ಯಾಯಮೂರ್ತಿಗೆ ಲವ್ ಲೆಟರ್ ಬರೆದು ಜೈಲು ಸೇರಿದ ಭೂಪ
ಕವರ್ದಾ(ಚತ್ತೀಸ್‌ಗಢ್) , ಗುರುವಾರ, 25 ಫೆಬ್ರವರಿ 2016 (17:17 IST)
ಯುವಕನೊಬ್ಬ ತರಬೇತಿ ಪಡೆಯುತ್ತಿದ್ದ ಮಹಿಳಾ ನ್ಯಾಯಮೂರ್ತಿಯೊಬ್ಬರಿಗೆ ಲವ್ ಲೆಟರ್ ಬರೆದು ಜೈಲಿನ ಕಂಬಿ ಎಣಿಸುತ್ತಿರುವ ಘಟನೆ ವರದಿಯಾಗಿದೆ.
 
ಆರೋಪಿ ಅಜಯ್ ಪಾಲಿ, ಮಹಿಳಾ ನ್ಯಾಯಮೂರ್ತಿಗೆ ಲವ್ ಲೆಟರ್ ಬರೆದು ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಇದರಿಂದ ಆತಂಕಗೊಂಡ ಮಹಿಳಾ ನ್ಯಾಯಮೂರ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.  
 
ದೂರು ದಾಖಲಿಸಿಕೊಂಡ ಕೋತ್ವಾಲಿ ಪೊಲೀಸ್ ಠಾಣೆಯ ಪೊಲೀಸರು, ಆರೋಪಿ ಅಜಯ್‌ನನ್ನು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 
ವಕೀಲರಾದ ಪೋಕ್ರಾಜ್ ಠಾಕೂರ್ ಬಳಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ಅಜಯ್, ಮಹಿಳೆ ನ್ಯಾಯಮೂರ್ತಿಯ ಸೌಂದರ್ಯಕ್ಕೆ ಮರಳಾಗಿ ಲವ್ವನಲ್ಲಿ ಬಿದ್ದಿದ್ದ ಎನ್ನಲಾಗಿದೆ.
 
ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದು ಮಹಿಳಾ ನ್ಯಾಯಮೂರ್ತಿಗೆ ಲವ್ ಲೆಟರ್ ಬರೆದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Share this Story:

Follow Webdunia kannada