Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‌ಗೆ ವಿರೋಧ ಪಕ್ಷ ನಾಯಕನ ಸ್ಥಾನ ನಿರಾಕರಿಸಿದ ಸ್ಪೀಕರ್

ಕಾಂಗ್ರೆಸ್‌ಗೆ ವಿರೋಧ ಪಕ್ಷ ನಾಯಕನ ಸ್ಥಾನ ನಿರಾಕರಿಸಿದ ಸ್ಪೀಕರ್
ನವದೆಹಲಿ , ಬುಧವಾರ, 20 ಆಗಸ್ಟ್ 2014 (12:08 IST)
ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕನ ಸ್ಥಾನ ನೀಡಬೇಕೆಂಬ ಕಾಂಗ್ರೆಸ್ ಬೇಡಿಕೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್  ಮಂಗಳವಾರ ತಿರಸ್ಕರಿಸಿದ್ದಾರೆ.

ಈ ಹಿಂದಿನ ನಿದರ್ಶನ ಮತ್ತು ಸಂಪ್ರದಾಯದ ಆಧಾರದ ಮೇಲೆ ಪ್ರತಿಪಕ್ಷ ಸ್ಥಾನದ ಬೇಡಿಕೆಯನ್ನು ತಳ್ಳಿಹಾಕಿರುವುದಾಗಿ ಸ್ಪೀಕರ್ ಹೇಳಿದ್ದಾರೆ.
 
ಸುಮಿತ್ರಾರವರ ಈ ನಿರ್ಧಾರವನ್ನು  ಕಾಂಗ್ರೆಸ್ ಪಕ್ಷಕ್ಕೆ ಪತ್ರಮುಖೇನ  ತಿಳಿಸಲಾಗಿದೆ. ತಮ್ಮ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ  ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡಬೇಕೆಂದು  ಕಾಂಗ್ರೆಸ್ ಅಧ್ಯಕ್ಷೆ  ಸೋನಿಯಾ ಗಾಂಧಿ , ಸುಮಿತ್ರಾ ಮಹಾಜನ್ ಅವರಿಗೆ ಪತ್ರ ಬರೆದಿದ್ದರು.
 
''ಕಾಂಗ್ರೆಸ್‌ಗೆ ಪ್ರತಿಪಕ್ಷ ಸ್ಥಾನ ನೀಡಲಾಗದು. ನನ್ನ ನಿರ್ಧಾರ ಹಿಂದಿನ ನಿದರ್ಶನಗಳನ್ನು ಆಧರಿಸಿದೆ. ಅಲ್ಲದೇ ಅಟಾರ್ನಿ ಜನರಲ್ ಮುಕುಲ್ ರೋಹತಗಿ ಅವರ ಬಳಿ ಇದನ್ನು ಚರ್ಚಿಸಿದ್ದೇನೆ. ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಇರಬೇಕಾದಷ್ಟು ಸ್ಥಾನವನ್ನು ಕಾಂಗ್ರೆಸ್ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ'' ಎಂದು ಮಹಾಜನ್ ಹೇಳಿದ್ದಾರೆ.
 
ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಖರ್ಗೆ ಕಾಂಗ್ರೆಸ್ ಹೈ ಕಮಾಂಡ್ ಮತ್ತು ಎಐಸಿಸಿ ಕಾನೂನು ವಿಭಾಗವನ್ನು  ಸಂಪರ್ಕಿಸಿ ನಂತರ  ತಮ್ಮ ಅಭಿಪ್ರಾಯವನ್ನು ತಿಳಿಸುವುದಾಗಿ ಹೇಳಿದ್ದಾರೆ. 

Share this Story:

Follow Webdunia kannada