Select Your Language

Notifications

webdunia
webdunia
webdunia
webdunia

ಎನ್‌ಡಿಎ ಮುಖ್ಯಸ್ಥರಾಗಿ ಮೋದಿ, ಸ್ಪೀಕರ್ ಪದಕ್ಕೆ ಅಡ್ವಾಣಿ !

ಎನ್‌ಡಿಎ ಮುಖ್ಯಸ್ಥರಾಗಿ ಮೋದಿ, ಸ್ಪೀಕರ್ ಪದಕ್ಕೆ ಅಡ್ವಾಣಿ !
ನವದೆಹಲಿ , ಗುರುವಾರ, 15 ಮೇ 2014 (12:20 IST)
ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಗೆ ಒಂದು ದಿನ ಬಾಕಿ ಇದ್ದು ಸಮೀಕ್ಷೆಗಳನ್ನು ನಂಬಿ ಕುಳಿತಿರುವ ಬಿಜೆಪಿ ಅಧಿಕಾರದ ಲೆಕ್ಕಾಚಾರದಲ್ಲಿ ತೊಡಗಿದೆ. ನಾಳೆ ಸಿಗಲಿರುವ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಬಹುಮತಗಳಿಸಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಧ್ಯಕ್ಷರಾಗಬಹುದು ಎಂದು  ವರದಿಯಾಗಿದೆ.

ಆ ಸಂದರ್ಭದಲ್ಲಿ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಲೋಕಸಭೆಯ ಸ್ಪೀಕರ್ ಆಗ್ ಆಯ್ಕೆಯಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. 
 
ಬುಧವಾರ ಮೋದಿಯವರ ಜತೆ ಅವರ ಗಾಂಧೀನಗರದ ನಿವಾಸದಲ್ಲಿ  ನಡೆಸಿದ ಸಭೆಯಲ್ಲಿ, ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೆಟ್ಲಿ ಪಾಲ್ಗೊಂಡಿದ್ದರು. 
 
ಆಡ್ವಾಣಿ ಸೇರಿದಂತೆ  ಹಿರಿಯ ನಾಯಕರಿಗೆ ನೀಡಬೇಕಾಗಿರುವ ಸ್ಥಾನಮಾನಗಳ ಕುರಿತು ಪ್ರಮುಖವಾಗಿ ಚರ್ಚಿಸಲಾಗಿದ್ದು ಸುಮಾರು ಐದು ಗಂಟೆಗಳ ಕಾಲ ಸಭೆಯನ್ನು ನಡೆಸಲಾಯಿತು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. 
 
ಏತನ್ಮಧ್ಯೆ, ಆಡ್ವಾಣಿ ಮತ್ತು ಅವರ ನಿಕಟವರ್ತಿ ಸುಷ್ಮಾ ಸ್ವರಾಜ್ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಮೇಲೆ ಸಂತೋಷವಾಗಿಲ್ಲ ಎಂದು ಹೇಳಲಾಗುತ್ತಿದೆ. 
 
ಆದರೆ ಇದನ್ನು ತಳ್ಳಿ ಹಾಕಿರುವ ಆರ್‌ಎಸ್ಎಸ್ " ಈ ಸಭೆಗಳು ಆತಂಕದ ಪರಿಸ್ಥಿತಿಯ ಕಾರಣಕ್ಕೆ ನಡೆದಿಲ್ಲ. ಸಭೆಯಲ್ಲಿ ಪಾಲ್ಗೊಂಡಿರುವ ನಾಯಕರು ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ.  ಎಲ್.ಕೆ. ಆಡ್ವಾಣಿ, ಸುಷ್ಮಾ ಸ್ವರಾಜ್  ಒಂದೇ ಒಂದು ಬಾರಿ ಕೂಡ ತಾವು ಅಸಂತುಷ್ಠರಾಗಿದ್ದೇವೆ ಎಂದು ಹೇಳಿಲ್ಲ. ಪಕ್ಷದಲ್ಲಿ ಎಲ್ಲವನ್ನು ಸರಿಪಡಿಸಲು ಸಂಘ ರಿಮೋಟ್ ಕಂಟ್ರೋಲ್ ನ್ನು ಬಳಸುವುದಿಲ್ಲ ಎಂದು ಹೇಳಿದೆ. 

Share this Story:

Follow Webdunia kannada