Webdunia - Bharat's app for daily news and videos

Install App

ದೆಹಲಿಯಂತೆ, ಬಿಹಾರದಲ್ಲೂ ಬಿಜೆಪಿಗೆ ಸೋಲು: ಕೇಜ್ರಿವಾಲ್

Webdunia
ಶನಿವಾರ, 25 ಜುಲೈ 2015 (16:13 IST)
ಕೇಂದ್ರದೊಂದಿಗೆ ನಿರತರ ಜಟಾಪಟಿಯಲ್ಲಿ ತೊಡಗಿರುವ ದೆಹಲಿ ಮುಖ್ಯಮಂತ್ರಿ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಚುನಾವಣೆ ಸೋತಂತೆ ಬಿಹಾರದಲ್ಲೂ ಬಿಜೆಪಿ ಸೋಲನ್ನು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

ದೆಹಲಿ ಸಾರಿಗೆ ಸಚಿವ ಗೋಪಾಲ್ ರೈ ಆಯೋಜಿಸಿದ್ದ ಈದ್ ಮಿಲಾದ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, "ಬಿಜೆಪಿ ಈ ಮೊದಲು ಎಲ್ಲ ಚುನಾವಣೆಗಳನ್ನು ಗೆದ್ದುಕೊಂಡಿತ್ತು. ಆದರೆ ದೆಹಲಿಯಲ್ಲಿ ಗೆಲುವು ಕಂಡುಕೊಳ್ಳಲು ಅವರಿಂದಾಗಲಿಲ್ಲ. ಎಲ್ಲರೂ ಅವರು ತಮ್ಮ ವಿಜಯದ ಅಭಿಯಾನವನ್ನು ಮುಂದುವರೆಸುತ್ತಾರೆ ಎಂಬುದಾಗಿ ಅಂದುಕೊಂಡಿದ್ದರು. ಆದರೆ ಬಳಿಕ ಸತತ ಗೆಲುವಿನ ಬಳಿಕ ಅವರು ದೆಹಲಿಯನ್ನು ಕಳೆದುಕೊಂಡರು. ಈಗ ಬಿಹಾರದಲ್ಲೂ ಅದೇ ಫಲಿತಾಂಶ ಮರುಕಳಿಸಲಿದೆ", ಎಂದು ಹೇಳಿದ್ದಾರೆ. 
 
"ಕೆಲವು ರಾಜಕೀಯ ಪಕ್ಷಗಳು ಮತ್ತು ನಾಯಕರು ಮತಕ್ಕಾಗಿ ಧರ್ಮದ ಹೆಸರಲ್ಲಿ ವಿಷಕಾರಿ ರಾಜಕೀಯವನ್ನು ನಡೆಸುತ್ತಾರೆ", ಎಂದು ಅವರು ಆರೋಪಿಸಿದ್ದಾರೆ. 
 
"ನಾವು 67 ಸೀಟುಗಳನ್ನು ಗೆದ್ದಿದ್ದು, ಕೇಂದ್ರ ಸರ್ಕಾರದ ನಿದ್ದೆಗೆಡಿಸಿದೆ. ನಾವು ದಿನದ 24 ಗಂಟೆಯೂ ಸಾರ್ವಜನಿಕ ಸೇವೆಗೆ ತತ್ಪರರಾಗಿದ್ದೇವೆ. ನಾವು ಮಾಡಿದ್ದ ವಾಗ್ದಾನಗಳನ್ನು ತುಸು ತುಸುವಾಗಿ ಈಡೇರಿಸುತ್ತಿದ್ದೇವೆ", ಎಂದು ಆಪ್ ನಾಯಕ ಹೇಳಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments