ಕಾಶ್ಮಿರದಲ್ಲಿನ ಜೀವನ ನಾಜಿ ಅಡಳಿತಾವದಿಗಿಂತ ಕೆಟ್ಟದಾಗಿದೆ: ಪಿಡಿಪಿ ಸಂಸದ ತಾರೀಕ್ ಕರ್ರಾ

Webdunia
ಶುಕ್ರವಾರ, 16 ಸೆಪ್ಟಂಬರ್ 2016 (12:16 IST)
ಕಾಶ್ಮಿರದಲ್ಲಿನ ಜೀವನ ನಾಜಿ ಅಡಳಿತಾವದಿಗಿಂತ ಕೆಟ್ಟದಾಗಿದೆ ಎಂದು ಶ್ರೀನಗರದ ಪಿಡಿಪಿ ಸಂಸದ ತಾರೀಕ್ ಕರ್ರಾ ತಮ್ಮದೇ ಪಕ್ಷದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
 ಸಂಸತ್‌ಗೆ, ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಮಾತನಾಡಿದ ಪಿಡಿಪಿ ಪಕ್ಷದ ಸಂಸದ ತಾರೀಕ್, ರಾಜ್ಯಾದ್ಯಂತ ಹತ್ಯೆಗಳು ನಡೆಯುತ್ತಿವೆ. ನಾಜಿ ಅಧಿಕಾರವಧಿಗಿಂತಲೂ ಜನರನ್ನು ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಜಮ್ಮು ಕಾಶ್ಮಿರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜನರು ಈದ್ ಹಬ್ಬದ ಪ್ರಾರ್ಥನೆ ಮಾಡಲು ಸಾಧ್ಯವಾಗಿಲ್ಲ. ಮಂದಿರ ಮಸೀದಿಗಳನ್ನು ಮುಚ್ಚಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಮತ್ತು ರಾಜ್ಯದಲ್ಲಿ ಪಿಡಿಪಿ ಸರಕಾರದ ಕೀಳು ರಾಜಕೀಯ ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಗುಡುಗಿದ್ದಾರೆ. 
 
ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಪಿಡಿಪಿ ಸರಕಾರದ ಮುಂದೆ ಕೈಗೊಂಬೆಯಾಗುವುದು ಅಥವಾ ಶರಣಾಗುವುದು ನನ್ನಿಂದ ಸಾಧ್ಯವಿಲ್ಲವಾದ್ದರಿಂದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ ಎಂದು ಪಿಡಿಪಿ ಸಂಸ್ಥಾಪಕ ಮಾಜಿ ಸಂಸದ ತಾರೀಕ್ ಕಾರ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊಟ್ಟೆ ಪ್ರಿಯರೇ ಹುಷಾರ್ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಮುಗಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಂಜಯ್ ಸರೋಗಿ ಹೆಗಲಿಗೆ

ಮದ್ಯಪಾನ ಪಾರ್ಟಿ ವೇಳೆ ಜಗಳ, ಒಬ್ಬನ ಹತ್ಯೆಯಲ್ಲಿ ಅಂತ್ಯ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್

ಮುಂದಿನ ಸುದ್ದಿ
Show comments