Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳಿಗೆ ಕಿಸ್, ಸೆಕ್ಸ್ ಮತ್ತು ರೇಪ್ ಹೇಗೆ ಮಾಡಬೇಕು ಎಂದು ಸಲಹೆ ನೀಡುತ್ತಿದ್ದ ಗ್ರಂಥಪಾಲಕ ಅರೆಸ್ಟ್

ವಿದ್ಯಾರ್ಥಿಗಳಿಗೆ ಕಿಸ್, ಸೆಕ್ಸ್ ಮತ್ತು ರೇಪ್ ಹೇಗೆ ಮಾಡಬೇಕು ಎಂದು ಸಲಹೆ ನೀಡುತ್ತಿದ್ದ ಗ್ರಂಥಪಾಲಕ ಅರೆಸ್ಟ್
ಜಬಲ್‌ಪುರ್(ಮಧ್ಯಪ್ರದೇಶ) , ಶನಿವಾರ, 5 ಸೆಪ್ಟಂಬರ್ 2015 (14:42 IST)
ಮಿಶನರಿ ಶಾಲೆಯಲ್ಲಿ ಓದುತ್ತಿದ್ದ ಐದನೇ ತರಗತಿಯ ಮಕ್ಕಳಿಗೆ ಯಾವ ರೀತಿ ಕಿಸ್ ಕೊಡಬೇಕು, ಸೆಕ್ಸ್ ಮತ್ತು ರೇಪ್ ಯಾವ ರೀತಿ ಮಾಡಬೇಕು ಎಂದು ಸಲಹೆ ಕೊಡುತ್ತಿದ್ದ ಗ್ರಂಥಪಾಲಕನನ್ನು ಪೋಸ್ಕೋ ಕಾಯ್ದೆಯಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
 
ಗ್ರಂಥಪಾಲಕನ ವರ್ತನೆಯ ಬಗ್ಗೆ ಮಕ್ಕಳು ಮನೆಯಲ್ಲಿ ಪೋಷಕರಿಗೆ ತಿಳಿಸಿದಾಗ, ಪೋಷಕರು ಕೂಡಲೇ ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಲಾ ಅಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.
 
ಇಬ್ಬರು ವಿದ್ಯಾರ್ಥಿಗಳ ಪೋಷಕರು ಶಾಲಾ ಅಡಳಿತ ಮಂಡಳಿ ಮತ್ತು ಆರೋಪಿ ಗ್ರಂಥಪಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಖಿಲ್ ವರ್ಮಾ ತಿಳಿಸಿದ್ದಾರೆ. 
 
ವಿದ್ಯಾರ್ಥಿನಿಯೊಬ್ಬಳು ಗ್ರಂಥಪಾಲಕನ ವರ್ತನೆಯ ಬಗ್ಗೆ ತಾಯಿಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಶಾಲೆ ಪ್ರಾಂಶುಪಾಲ ಕ್ಷಮೆ ಕೋರಿ, ಆರೋಪಿಯನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
 

Share this Story:

Follow Webdunia kannada