Select Your Language

Notifications

webdunia
webdunia
webdunia
webdunia

ಮುಫ್ತಿ ಹೇಳಿಕೆಗೆ 56-ಇಂಚ್ ಎದೆಯುಳ್ಳವರು ಪ್ರತಿಕ್ರಿಯೆ ನೀಡಲಿ: ಮೋದಿಗೆ ನಿತೀಶ್ ಲೇವಡಿ

ಮುಫ್ತಿ ಹೇಳಿಕೆಗೆ 56-ಇಂಚ್ ಎದೆಯುಳ್ಳವರು ಪ್ರತಿಕ್ರಿಯೆ ನೀಡಲಿ: ಮೋದಿಗೆ ನಿತೀಶ್ ಲೇವಡಿ
ನವದೆಹಲಿ , ಸೋಮವಾರ, 2 ಮಾರ್ಚ್ 2015 (17:25 IST)
ಜಮ್ಮು ಕಾಶ್ಮಿರದಲ್ಲಿ ನಡೆದ ಶಾಂತಿಯುತ ಚುನಾವಣೆಗೆ ಪಾಕಿಸ್ತಾನದ ಉಗ್ರರು ಮತ್ತು ಪ್ರತ್ಯೇಕತಾವಾದಿಗಳಾದ ಹುರಿಯತ್ ಮುಖಂಡರು ಕಾರಣ ಎಂದು ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಹೇಳಿಕೆಗೆ 56-ಇಂಚ್ ಎದೆಯುಳ್ಳವರು ಉತ್ತರಿಸಬೇಕು ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೋದಿಗೆ ಟಾಂಗ್ ನೀಡಿದ್ದಾರೆ.
 
ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ವೀರಾವೇಶದಿಂದ ಪಾಕ್ ವಿರುದ್ಧ ಹೇಳಿಕೆ ನೀಡುತ್ತಿದ್ದ ಮೋದಿ ಇದೀಗ ಬಿಜೆಪಿಯ ಮಿತ್ರಪಕ್ಷವಾದ ಪಿಡಿಪಿ ಮುಖ್ಯಸ್ಥನ ಹೇಳಿಕೆಗೆ ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
 
ಜಮ್ಮು ಕಾಶ್ಮಿರದಲ್ಲಿ ಸೇನಾಪಡೆಗಳು ಹಗಲಿರಳು ಉಗ್ರರ ಉಪಟಳ ತಡೆಯಲು ಹರಸಾಹಸ ಪಡುತ್ತಿವೆ.ಶಾಂತಿಯುತ ಮತದಾನಕ್ಕೆ ಸೇನಾಪಡೆಯನ್ನು ಹೊಗಳುವುದು ಬಿಟ್ಟು ಪಾಕ್ ಉಗ್ರರ ಬಗ್ಗೆ ಹೇಳಿಕೆ ನೀಡಿ ಮುಫ್ಚಿ ಮೊಹಮ್ಮದ್ ಸಯೀದ್ ದೇಶ ವಿರೋಧಿಯಾಗಿದ್ದಾರೆ ಎಂದು ಗುಡುಗಿದ್ದಾರೆ.
 
ಕಾಶ್ಮಿರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ ಮುಫ್ಚಿ ಮೊಹಮ್ಮದ್ ಸಯೀದ್, ರಾಜ್ಯದಲ್ಲಿ ಶಾಂತಿಯುತ ಚುನಾವಣೆ ನಡೆಯುವಂತೆ ಮಾಡಿದ ಗೌರವ ಹುರಿಯತ್, ಪಾಕಿಸ್ತಾನ ಮತ್ತು ಉಗ್ರರಿಗೆ ಸಲ್ಲಬೇಕು ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. 
 
ಏತನ್ಮಧ್ಯೆ, ಮುಫ್ತಿ ಮೊಹಮ್ಮದ್ ನೀಡಿದ ಹೇಳಿಕೆಗೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
 

Share this Story:

Follow Webdunia kannada