Webdunia - Bharat's app for daily news and videos

Install App

1,590 ರೂ. ಮೊಬೈಲ್ EMI ಪಾವತಿಸಿ 1 ಕೋಟಿ ರೂ. ಗೆದ್ದ ವಿದ್ಯಾರ್ಥಿನಿ

Webdunia
ಶನಿವಾರ, 15 ಏಪ್ರಿಲ್ 2017 (11:03 IST)
ಡಿಜಿಟಲ್ ಪೇಮೆಂಟ್ ಉತ್ತೇಜನಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಲಕ್ಕಿ ಗ್ರಾಹಕ್ ಯೋಜನೆಯ ಲಕ್ಕಿ ಡ್ರಾನಲ್ಲಿ ಮಹಾರಾಷ್ಟ್ರದ ಲಾತೂರ್`ನ ವಿದ್ಯಾರ್ಥಿನಿ ಕೋಟಿ ಗೆದ್ದಿದ್ದಾರೆ. ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಓದುತ್ತಿರುವ ಶ್ರದ್ಧಾ ಮೋಹನ್ ಮೆಂಗ್ ಶೆಟ್ಟೆ ನಿನ್ನೆಯ ಲಕ್ಕಿ ಡ್ರಾನಲ್ಲಿ 1 ಕೋಟಿ ರೂಪಾಯಿ ಗೆದ್ದಿದ್ದಾರೆ.
 

ಶ್ರದ್ದಾ ತಮ್ಮ ರೂಪೇ ಕಾರ್ಡ್ ಮೂಲಕ  ಹೊಸ ಮೊಬೈಲ್ ಫೋನ್ ಇಎಂಐ  ವಹಿವಾಟು 1590 ರೂ, ಪಾವತಿಸಿದ್ದರು.  ಈ ವಹಿವಾಟೇ ಶ್ರದ್ಧಾಳನ್ನ ಕೋಟ್ಯಾಧೀಶೆಯನ್ನಾಗಿ ಮಾಡಿದೆ.

ಗುಜರಾತಿನ ಖಾಂಭಟ್`ನ ಪ್ರಾಥಮಿಕ ಶಾಲೆ ಶಿಕ್ಷಕ ಹಾರ್ದಿಕ್ ಕುಮಾರ್, 2ನೇ ಬಹುಮಾನ 50 ಲಕ್ಷ ರೂಪಾಯಿ ಗೆದ್ದಿದ್ಧಾರೆ. ಕೇವಲ 100 ರೂ. ವಹಿವಾಟು ನಡೆಸಿದ್ದ ಉತ್ತರಾಖಂಡ್`ನ ಶೇರ್ ಪುರ್ ಹಳ್ಳಿಯ ಭರತ್ ಸಿಂಗ್ 3ನೇ ಬಹುಮಾನ 25 ಲಕ್ಷ ರೂಪಾಯಿ ಗೆದ್ದಿದ್ದಾರೆ.

ಇತ್ತ, ಡಿಜಿ ಧನ್ ಯೋಜನೆಯಡಿ ತಮಿಳುನಾಡಿನ ತಂಬರಮ್ ಜುವೆಲರಿ ಉದ್ಯಮಿ ಪದ್ಮನಾಭನ್ 50 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. 300 ರೂ. ಪೇಮೆಂಟ್ ಪಡೆದಿದ್ದ ಪದ್ಮನಾಭನ್`ಗೆ ಈ ಅದೃಷ್ಟ ಒಲಿದಿದೆ.

ಥಾಣೆಯ ಬ್ಯೂಟಿ ಪಾರ್ಲರ್ ಮಾಲಿಕರಾದ ರಾಗಿಣಿ ರಾಜೇಂದ್ರ ಉಟ್ಟೇಕರ್ 2 ನೇ ಬಹುಮಾನ 25 ಲಕ್ಷ ರೂ. ಮತ್ತು ತೆಲಂಗಾಣದ ಅಮೀರ್ ಪೇಟೆಯಲ್ಲಿ ಜವಳಿ ಅಂಗಡಿ ಇಟ್ಟಿರುವ ಶೇಖ್ ರಫಿ 12 ಲಕ್ಷ ರೂ. 3ನೇ ಬಹುಮಾನ ಗೆದ್ದಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments