Select Your Language

Notifications

webdunia
webdunia
webdunia
webdunia

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮನೆ ಮಾಲೀಕ

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮನೆ ಮಾಲೀಕ
ಗಾಜಿಯಾಬಾದ್ , ಶನಿವಾರ, 31 ಡಿಸೆಂಬರ್ 2016 (11:25 IST)
17 ವರ್ಷದ ಬಾಲಕ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಹೇಯ ಕೃತ್ಯ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.
 
ರಾಹುಲ್ ಗಾರ್ಡನ್ ಕಾಲೋನಿ ನಿವಾಸಿಯಾಗಿರುವ ಬಾಲಕನ ಮೇಲೆ ಆತ ವಾಸಿಸುತ್ತಿದ್ದ ಮನೆ ಮಾಲೀಕ ಸಂಜು (29) ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಡಿಸೆಂಬರ್ 29 ಮತ್ತು 30ರ ನಡುವಿನ ರಾತ್ರಿ ಈ ಘಟನೆ ನಡೆದಿದ್ದು ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ತನ್ನ ಜತೆ ಬಹಳ ಸಲಿಗೆಯಿಂದ ಬಾಲಕನನ್ನು ಇಂದು ನಮ್ಮ ಮನೆಯಲ್ಲಿ ಮಲಗು ಎಂದು ಕರೆಸಿಕೊಂಡ ಆರೋಪಿ ಸಂಜು ಆತನ ಜತೆ ದುಷ್ಕೃತ್ಯವನ್ನೆಸಗಿದ್ದಾನೆ. ಘಟನೆಯಿಂದ ಆಘಾತಗೊಂಡ ಬಾಲಕ ಅಳುತ್ತಾ ತನ್ನ ಪೋಷಕರನ್ನು ಕರೆದಿದ್ದಾನೆ. ಆದರೆ ಆ ಸಮಯದಲ್ಲಿ ಆತನ ಮನೆಯಲ್ಲಿ ಯಾರೂ ಇರಲಿಲ್ಲ.
 
ಬಳಿಕ ಪೋಷಕರೊಂದಿಗೆ ಠಾಣೆಗೆ ತೆರಳಿದ ಬಾಲಕ ದೂರನ್ನು ದಾಖಲಿಸಿದ್ದಾನೆ.
 
ಬಾಲಕನಿಗೆ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ತುಂಗಾ ಎಡದಂಡೆ ಕಾಲುವೆ ಕಾಮಗಾರಿಯಲ್ಲಿ ಕಿಕ್‌ಬ್ಯಾಕ್ ಪಡೆದಿಲ್ಲ: ಕಿಮ್ಮನೆ ಪ್ರಮಾಣ