Webdunia - Bharat's app for daily news and videos

Install App

ಲಾಲೂ ಪ್ರಸಾದ್‌ ಯಾದವ್‌‌‌ರಿಗೂ ಇತ್ತಾ ಅಕ್ರಮ ಸಂಬಂಧ?

Webdunia
ಗುರುವಾರ, 21 ಆಗಸ್ಟ್ 2014 (19:43 IST)
ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ(ಆರ್‌‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌‌ ಮಹಿಳೆಯೊಬ್ಬಳ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ತಮ್ಮ ಹತ್ತಿರ ಬಲವಾದ ಸಾಕ್ಷಿಯಿದೆ ಎಂದು ಬಿಜೆಪಿ ಸಂಸದ ಅಶ್ವಿನ್‌ ಚೌಬೆ ಹೊಸ ಬಾಂಬ್ ಸಿಡಿಸಿದ್ದಾರೆ.
 
ಲಾಲೂ ಪ್ರಸಾದ್‌ ಯಾದವ್‌ ಜೆಪಿ ಚಳುವಳಿಯಲ್ಲಿ ಸರಕಾರದ ಎಜೆಂಟ್‌‌'‌ರಂತೆ ಕಾರ್ಯನಿರ್ವಹಿಸಿ ಕಾಂಗ್ರೆಸ್‌‌‌ ಮತ್ತು ಸಿಐಡಿ ಅದಿಕಾರಿಗಳೊಂದಿಗೆ ಸಂಚು ರೂಪಿಸಿ ಆಂದೋಲನದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರ ಬಂಧನಕ್ಕೆ ಕಾರಣವಾಗಿದ್ದರು ಎಂದು ಆರೋಪಿಸಿದ್ದಾರೆ.
 
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧ್ಬುತ ಗೆಲುವನ್ನು ಸಾಧಿಸಿ, ಆರ್‌‌ಜೆಡಿ ಮತ್ತು ನಿತೀಶ್‌‌ ಕುಮಾರ್‌ರ ಪಕ್ಷವಾದ ಜೆಡಿಯುವನ್ನು ದೂಳಿಪಟವನ್ನಾಗಿಸಿತ್ತು. ಇದರ ನಂತರ 20 ವರ್ಷದಿಂದ ಶತ್ರುಗಳಾಗಿದ್ದ ನಿತೀಶ್‌ ಮತ್ತು ಲಾಲೂ ಇದೀಗ ಒಂದಾಗಿದ್ದಾರೆ. ಜೆಡಿಯು, ಕಾಂಗ್ರೆಸ್‌ ಮತ್ತು ಆರ್‌‌ಜೆಡಿ ಸೇರಿಕೊಂಡು ಈ ಬಾರಿಯ ವಿಧಾನ ಸಭೆ ಚುನಾವಣೆ ಎದುರಿಸಲಿದ್ದಾರೆ ಎಂದು ಬಿಜೆಪಿ ಸಂಸದ ಅಶ್ವಿನ್‌ ಚೌಬೆ ಹೇಳಿದ್ದಾರೆ. 
 
ಎರಡೂ ಪಕ್ಷಗಳು ಒಪ್ಪಂದ ಮಾಡಿಕೊಂಡ ನಂತರ ಲಾಲೂ ಮತ್ತು ನಿತೀಶ್‌‌ ನಿರಂತರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಗುರಿಯನ್ನಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಅಶ್ವಿನ್‌ ಚೌಬೆ ಆರೋಪಗಳಿಗೆ ಲಾಲು ಯಾವ ರೀತಿ ತಿರುಗೇಟು ನೀಡುತ್ತಾರೆಂದು ಕಾದು ನೋಡಬೇಕಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments