Select Your Language

Notifications

webdunia
webdunia
webdunia
webdunia

ರಾಷ್ಟ್ರಪತಿ ಕಾರ್ಯದರ್ಶಿ ಹಣೆಗೂ ವಿವಾದವನ್ನಂಟಿಸಿದ ಲಲಿತ್ ಮೋದಿ

ರಾಷ್ಟ್ರಪತಿ ಕಾರ್ಯದರ್ಶಿ ಹಣೆಗೂ ವಿವಾದವನ್ನಂಟಿಸಿದ ಲಲಿತ್ ಮೋದಿ
ನವದೆಹಲಿ , ಬುಧವಾರ, 24 ಜೂನ್ 2015 (15:54 IST)
ಲಂಡನ್‌ನಲ್ಲಿ ಕುಳಿತುಕೊಂಡು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಕೋಲಾಹಲವನ್ನು ಎಬ್ಬಿಸಿರುವ ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ, ಒಬ್ಬೊರ ಹಿಂದೊಬ್ಬರನ್ನು ತಮ್ಮ ಗುರಿಯನ್ನಾಗಿಸುತ್ತಿದ್ದಾರೆ. ಕಳೆದ ವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕಡೆ ಅಸ್ತ್ರ ಪ್ರಯೋಗಿಸಿದ್ದ ಮೋದಿ ಈಗ ಪ್ರಣವ್ ಅವರ ಕಾರ್ಯದರ್ಶಿಯವರ ಹಣೆಗೆ ಆರೋಪವನ್ನಂಟಿಸಿದ್ದಾರೆ. 
 
ಅತಿದೊಡ್ಡ ಹವಾಲಾ ಆಪರೇಟರ್ ಆದ ವಿವೇಕ ನಾಗಪಾಲ್ ಅವರ ಜತೆ ಒಮಿತಾ ಪಾಲ್ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಅವರು ಆರೋಪ ಹೊರಿಸಿದ್ದಾರೆ. 
 
" ಒಮಿತಾ ಪಾಲ್ 'ಬ್ಯಾಗ್ ಮ್ಯಾನ್' ಎಂದೇ ಚಿರಪರಿಚಿತರಾದ ಅತಿ ದೊಡ್ಡ ಹವಾಲಾ ಆಯೋಜಕರಾದ ವಿವಿಕ್ ನಾಗಪಾಲ್ ವಿರುದ್ಧ ಅನೇಕ ದಾಖಲೆಗಳಿವೆ. ಯಾರಾದರೂ ಆ ಬಗ್ಗೆ ಗಮನ ನೀಡಿದ್ದಾರಾ?," ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.
 
ಸ್ವತಃ ಹಗರಣದ ಆರೋಪಿಯಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮೋದಿ, ಕೇಂದ್ರ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಒಡೆತನದ ಕೊಚ್ಚಿ ಟಸ್ಕರ್ಸ್ ಕೇರಳ ಮಾಲೀಕತ್ವದ ವಿವಾದದಲ್ಲಿ ಅವರ ಪಾತ್ರದ ಬಗ್ಗೆ ನಾನು ಬಹಿರಂಗಪಡಿಸಿದ್ದೆ. ಅದಕ್ಕೆ ಪ್ರತೀಕಾರವಾಗಿ ಆಗ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ ನನ್ನ ವಿರುದ್ಧ ತನಿಖೆಗೆ ಆದೇಶ ನೀಡಿರುವುದಾಗಿ ಲಲಿತ್ ಮೋದಿ ಕಳೆದ ವಾರ ಆರೋಪಿಸಿದ್ದರು. 

Share this Story:

Follow Webdunia kannada