Select Your Language

Notifications

webdunia
webdunia
webdunia
webdunia

ಪಂಚಾಯತ್ ಕಾರ್ಯದರ್ಶಿಗೆ ಬಸ್ಕಿ ಶಿಕ್ಷೆ ನೀಡಿದ ಲೇಡಿ ಸಿಂಗಂ

ಪಂಚಾಯತ್ ಕಾರ್ಯದರ್ಶಿಗೆ ಬಸ್ಕಿ ಶಿಕ್ಷೆ ನೀಡಿದ ಲೇಡಿ ಸಿಂಗಂ
ಭೂಪಾಲ್: , ಗುರುವಾರ, 5 ಮೇ 2016 (17:30 IST)
ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಪಂಚಾಯತ್ ಕಾರ್ಯದರ್ಶಿಗೆ  ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ ಈ ಲೇಡಿ ಸಿಂಗಂ ನಿಜವಾಗಲೂ ದಿಟ್ಟ ಮಹಿಳೆ.  ಐಎಎಸ್ ಅಧಿಕಾರಿಣಿ ನಿಧಿ ನಿವೇದಿತಾ ಗ್ರಾಮದಲ್ಲಿ ಕಟ್ಟಿಸಿದ ಶೌಚಾಲಯಗಳ ಪರಿಶೀಲನೆ ಮಾಡುತ್ತಿದ್ದರು. 
 
ಪಂಚಾಯತ್ ಕಾರ್ಯದರ್ಶಿ ರಾಮ್‌ಸುಬಾಶ್ ಸಿಂಗ್ ಟಾಯ್ಲೆಟ್ ಹೊರಗೆ ಬೇಸಿನ್ ಮತ್ತು ನಳ್ಳಿಗಳ ಚಿತ್ರಗಳನ್ನು ಫೋಟೋ‌ಶಾಪ್ ಮಾಡಿ ಬಿಲ್ ಕ್ಲೇಮು ಮಾಡಿದ್ದನ್ನು ಅಧಿಕಾರಿಣಿ ಪತ್ತೆಹಚ್ಚಿದರು. 
 
ಇಡೀ ಗ್ರಾಮಸ್ಥರ ಎದುರು ಬಸ್ಕಿ ಹೊಡೆಯುವಂತೆ ಕಾರ್ಯದರ್ಶಿಗೆ ಸೂಚಿಸುವ ಮೂಲಕ ಲೇಡಿ ಸಿಂಗಂ ಶಿಕ್ಷೆ ನೀಡಿದರು. ಶೌಚಾಲಯದ ಹೊರಗೆ ಅವನು ಚಿತ್ರಿಸಿರುವ ರೀತಿಯಲ್ಲಿ ಯಾವುದೇ ವಾಷ್ ಬೇಸಿನ್ ಅಧಿಕೃತ ಕಾಗದಪತ್ರಗಳಲ್ಲಿ ಇರಲಿಲ್ಲ.  ತನ್ನ ತಪ್ಪನ್ನು ಒಪ್ಪಿಕೊಂಡ ಪಂಚಾಯಿತಿ ಕಾರ್ಯದರ್ಶಿ ಕ್ಷಮಿಸುವಂತೆ ಲೇಡಿ ಸಿಂಗಂ ಅವರನ್ನು ಕೇಳಿದಾಗ ಅವರು ಬಸ್ಕಿ ಹೊಡೆಯುವ ಶಿಕ್ಷೆಯನ್ನು ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್‌ಸ್ಟಾಗ್ರಾಂ ಹ್ಯಾಕ್‌ ಮಾಡಿದ ಬಾಲಕನಿಗೆ 10,000 ಡಾಲರ್ ಬಹುಮಾನ